ಕಸಾಪ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಪದ್ಮಿನಿ ನಾಗರಾಜ್ ರಾಜೀನಾಮೆ:ಕಾರಣಗಳೇನು?

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಪದ್ಮಿನಿ ನಾಗರಾಜ್ ಅವರು ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಪದ್ಮಿನಿ ಅವರು ತಾಯಿಯ ಅನಾರೋಗ್ಯದ ಕಾರಣ ರಾಜೀನಾಮೆ ನೀಡುತ್ತಿರುವದಾಗಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಸಾಹಿತ್ಯ ವಲಯದಲ್ಲಿ ಬೇರೆಯದ್ದೇ ಕಾರಣ ಇದೆ ಎಂಬ ಮಾತುಗಳು ಕೇಳೀ ಬರುತ್ತಿವೆ.  ಹಿನ್ನೆಲೆಯಲ್ಲಿ ಅವರನ್ನು ನೋಡಿಕೊಳ್ಳಬೇಕಾಗಿದೆ ಹಾಗಾಗಿ ಕಸಾಪದ ಮಹತ್ವದ ಜವಾಬ್ದಾರಿ ಹೊರಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ,

ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಅವರ ನಡೆಯನ್ನು ವಿರೋಧಿಸಿ ಪದ್ಮಿನಿ ಅವರು ರಾಜೀನಾಮೆ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಕಳೆದ ಹಲವು ತಿಂಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಜೋಷಿ ಅವರ ಕಾರ್ಯವೈಖರಿ ಕುರಿತು ಸಾಕಷ್ಟು ಅಸಮಾಧಾನ ಕೇಳಿ ಬರುತ್ತಿದೆ. ಅವರ ರಾಜೀನಾಮೆಗೂ ಒತ್ತಾಯ ಹೆಚ್ಚುತ್ತಿದೆ. ಅನೇಕ ಸಾಹಿತಿಗಳು ಅವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪದ್ಮಿನಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

More articles

Latest article

Most read