Friday, December 12, 2025

ಕನ್ನಡ್ ಅಲ್ಲ ಕನ್ನಡ : ಹಿಂದಿ ಭಾಷಿಗರಿಗೆ ಕನ್ನಡ ಪಾಠ ಮಾಡಿದ ಕೆಎಲ್ ರಾಹುಲ್

Most read

ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಕಾರಣ ಪಂದ್ಯಾವಳಿಯ ಪ್ರಯೋಜಕತ್ವದ ಜವಬ್ದಾರಿ ಹೊತ್ತಿರುವ ಸ್ಟಾರ್ ಸ್ಫೋಟ್ಸ್ ಭಿನ್ನ ವಿಭಿನ್ನವಾದ ಪ್ರೋಮೋಗಳ ಮೂಲಕ ಜನರನ್ನು ಆಕರ್ಷಿಲು ಮುಂದಾಗಿದೆ. ಇದೆ ವೇಳೆ ಪ್ರೋಮೋ ಶೂಟ್​ನಲ್ಲಿ ಭಾಗಿಯಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ಶೂಟಿಂಗ್​ ಸೆಟ್​ನಲ್ಲಿ ಕನ್ನಡವನ್ನು ಕನ್ನಡ್ ಎಂದು ಹೇಳಿದಕ್ಕಾಗಿ ರಾಹುಲ್ ಕೋಪಗೊಂಡ ಘಟನೆಯೂ ನಡೆದಿದೆ.

ಈ ನಡುವೆ ಐಪಿಎಲ್ ಪ್ರೋಮೋ ಶೂಟ್​ನಲ್ಲಿ ಬಾಗಿಯಾಗಿದ್ದ ಕನ್ನಡಿಗ ಕೆಎಲ್ ರಾಹುಲ್​ಗೆ ಹಿಂದಿವಾಲನ ಕನ್ನಡ ಉಚ್ಚರಣೆ ಕೋಪ ತರಿಸಿದೆ. ಹಿಂದಿವಾಲ ಕನ್ನಡ ಉಚ್ಚರಣೆಯಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿ ತಿದ್ದಿ ಸಾಕಾದ ರಾಹುಲ್ ನಿನಗೆ ಎಷ್ಟು ಸಾರಿ ಹೇಳುವುದು ಅದು ಕನ್ನಡ್ ಅಲ್ಲ ಕನ್ನಡ ಎಂದು ಹಿಂದಿವಾಲನ ಮೇಲೆ ರೇಗಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ವಾಸ್ತವವಾಗಿ ಐಪಿಎಲ್ ಪ್ರೋಮೋ ಶೂಟ್ ವೇಳೆ ಅಸಿಸ್ಟೆಂಟ್ ಡೈರೆಕ್ಟರ್ ಕೆಎಲ್ ರಾಹುಲ್​ಗೆ ಪ್ರೋಮೋ ಶೂಟ್​ನ ಸ್ಕ್ರೀಪ್ಟ್​ವೊಂದನ್ನು ನೀಡುತ್ತಾನೆ. ಈ ವೇಳೆ ಸ್ಕ್ರೀಪ್ಟ್ ಓದಲು ಆರಂಭಿಸಿದ ರಾಹುಲ್ ಅಸಿಸ್ಟೆಂಟ್ ಡೈರೆಕ್ಟರ್​ಗೆ ಇದನ್ನೆಲ್ಲ ಹೇಗೆ ನೆನಪಿಸಿಕೊಳ್ಳಲಿ ಅಣ್ಣ? ಕಂಠಪಾಠ ಮಾಡಲು ಬಂದರೆ ಸೀರಿಯಸ್ಸಾಗಿ ಮಾಡ್ತಿದ್ದೆ. ಆದರೆ ಇದೆಲ್ಲವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ? ಎಂದು ಆತನನ್ನು ಕೇಳಿದ್ದಾರೆ.

ಇದೇ ವೇಳೆ ಕನ್ನಡದಲ್ಲಿ ಪ್ರೋಮೋ ಶೂಟ್​ ಬಗ್ಗೆ ಮಾತನಾಡುವಾಗ ರಾಹುಲ್ ಕನ್ನಡ ಎಂಬ ಪದವನ್ನು ಉಚ್ಚರಣೆ ಮಾಡುತ್ತಾರೆ. ಈ ವೇಳೆ ಅಲ್ಲೇ ಇದ್ದ ಅಸಿಸ್ಟೆಂಟ್ ಡೈರೆಕ್ಟರ್ ಕನ್ನಡ ಎಂಬ ಪದವನ್ನ ಕನ್ನಡ್ ಎಂದು ಉಚ್ಚರಿಸುತ್ತಾರೆ. ಇದನ್ನು ಕೇಳಿದ ರಾಹುಲ್, ಏನಂದೆ? ಅದು ಕನ್ನಡ ಬಾಯ್, ಕನ್ನಡ್ ಅಲ್ಲ… ನಿಮಗೆಲ್ಲ ಎಷ್ಟು ಸಾರಿ ಹೇಳೋದು. ಎಲ್ಲಿ ನೀನು ಮತ್ತೊಮ್ಮೆ ಹೇಳು ಕನ್ನಡ ಎಂದು ರಾಹುಲ್ ಆತನಿಗೆ ಹೇಳಿದ್ದಾರೆ. ಆ ಬಳಿಕ ತನ್ನ ಉಚ್ಚರಣೆಯನ್ನು ಸರಿಪಡಿಸಿಕೊಂಡ ಆತ ‘ಕ್ಷಮಿಸಿ ಸರ್ ಕನ್ನಡ’ ಎಂದು ಸರಿಯಾಗಿ ಉಚ್ಚರಿಸಿದ್ದಾನೆ.

More articles

Latest article