ಬೆಂಗಳೂರು: ಕನ್ನಡ ಮಾತನಾಡುವ ವಿಷಯಕ್ಕೆ ಸಂಬಂಧಿಸಿದಂತೆ ಅನ್ಯ ಭಾಷೆಯ ಯುವಕನೊಬ್ಬ ಬೆಂಗಳೂರಿನಲ್ಲಿ ಆಟೊ ಚಾಲಕನೊಂದಿಗೆ ವಾಗ್ವಾದ ನಡೆಸಿರುವ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಜತೆಗೆ ಅಟೋ ಚಾಲಕನ ಕನ್ನಡ ಪ್ರೀತಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಗೆಯೇ ಯುವಕನ ವರ್ತನೆಗೆ ಕನ್ನಡಿಗರು ಕಿಡಿಕಾರಿದ್ದಾರೆ.
ಓಲ್ಡ್ ಏರ ಪೋರ್ಟ್ ರಸ್ತೆಯ ಮುರುಗೇಶ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆಟೊ ಚಾಲನೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದಿದ್ದ ಅನ್ಯ ರಾಜ್ಯದ ಯುವಕ ‘ಇದು ಬೆಂಗಳೂರು ಇರಬಹುದು, ಕನ್ನಡ ಅಲ್ಲ, ನೀನು ಹಿಂದಿ ಮಾತನಾಡು’ ಎಂದು ಆಟೊ ಚಾಲಕನಿಗೆ ಧಮಕಿ ಹಾಕಿದ್ದಾನೆ.
ಇದಕ್ಕೆ ತಕ್ಕ ಎದಿರೇಟು ನೀಡಿರುವ ಆಟೊ ಚಾಲಕ, ‘ಬೆಂಗಳೂರಿಗೆ ನೀನು ಬಂದಿರುವೆ. ನೀನು ಕನ್ನಡ ಮಾತನಾಡು’ ಎಂದು ಎಂದಿದ್ದಾರೆ. ಈ ವಿಡಿಯೋ ಮಾಡಿಕೊಂಡಿರುವ ಆಟೊ ಚಾಲಕ ನಂತರ ವೈರಲ್ ಮಾಡಿದ್ದಾರೆ. ತದನಂತರ ಈ ವಿಡಿಯೊ ಸಾಕಷ್ಟು ಗಮನ ಸೆಳೆದಿದ್ದು ಅನೇಕ ನೆಟ್ಟಿಗರು ಟೋ ಚಾಲಕನಿಗೆ ಮೆಚ್ಚುಗೆ ವ್ಯಕ್ತಪಡಿಸಿ ಯವಕನ ವರ್ತನೆಯನ್ನು ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಮೇಲಿಂದ ಮೇಲೆ ಹಿಂದಿ ಭಾಷಿಕರ ಹಾವಳಿ ಹೆಚ್ಚುತ್ತಿದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.