Sunday, July 14, 2024

ರಾಜ್ಯಪಾಲರಿಗೆ ಕನ್ನಡ, ಕರ್ನಾಟಕ ಇಷ್ಟವಿಲ್ಲ ಅಂದ್ರೆ ವಾಪಸ್ ಕೇಂದ್ರಕ್ಕೆ ಹೋಗಲಿ : ನಾರಾಯಣಗೌಡ

Most read

ನಾಮಫಲಕದಲ್ಲಿ ಶೇ.60 ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕದಿರುವುದರ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡುತ್ತಿವೆಯೋ ಗೊತ್ತಿಲ್ಲ. ಆದರೆ ರಾಜ್ಯಪಾಲರಿಗೆ ಕನ್ನಡ, ಕರ್ನಾಟಕ ಇಷ್ಟ ಆಗದಿದ್ದರೆ ರಾಜ್ಯದಿಂದ ಹೊರ ಹೋಗಲು ಅವರು ಸ್ವತಂತ್ರರು ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.

ಕನ್ನಡ ಕಡ್ಡಾಯ ಸುಗ್ರೀವಾಜ್ಞೆಗೆ ಸಹಿ ಹಾಕದ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾಮಫಲಕದಲ್ಲಿ ಶೇ.60 ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕದಿರುವುದರ ಹಿಂದೆ ಮಾರ್ವಾಡಿ, ಸಿಂಧಿ, ಹಿಂದಿಗಳು ಇದರ ಹಿಂದಿದ್ದಾರಾ ಎಂಬ ಅನುಮಾನವಿದೆ. ರಾಜ್ಯಪಾಲರಿಗೆ ಕನ್ನಡ, ಕರ್ನಾಟಕ ಇಷ್ಟವಿಲ್ಲ ಅಂದ್ರೆ ವಾಪಸ್ ಕೇಂದ್ರಕ್ಕೆ ಹೋಗಬಹುದು. ನಾಡು ನುಡಿಯ ವಿಚಾರದಲ್ಲಿ ಯಾರೂ ಆಟವಾಡದೆ ಸುಗ್ರೀವಾಜ್ಞೆ ಪ್ರತಿಗೆ ಸಹಿ ಮಾಡಬೇಕಿತ್ತು ಎಂದು ಹೇಳಿದರು.

ರಾಜ್ಯಪಾಲರು ಸಹಿ ಹಾಕದೆ ಇರಬಹುದು. ಆದರೆ, ಅಧಿವೇಶನದಲ್ಲಿ ಶಾಸಕರು ಪಕ್ಷಬೇಧವನ್ನು ಮರೆತು ಒಪ್ಪಿಗೆ ನೀಡಬೇಕು. ರಾಜ್ಯಪಾಲರು ಸಹಿ ಮಾಡದಿರುವುದು ಕರ್ನಾಟಕಕ್ಕೆ, ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಪರಿಗಣಿಸುತ್ತೇವೆ.

ಫೆಬ್ರವರಿ.28ರೊಳಗೆ ಅಂಗಡಿಗಳು ಕನ್ನಡ ನಾಮಫಲಕ ಅಳವಡಿಸದಿದ್ದರೆ ಮತ್ತೆ ಕರವೇ ಹೋರಾಟಕ್ಕೆ ಇಳಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

More articles

Latest article