Saturday, December 7, 2024

ಕಲ್ಕಡ್ಕ ಪ್ರಭಾಕರ್ ಭಟ್ ವಿರುದ್ದ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ : ಜನವರಿ 10ಕ್ಕೆ ವಿಚಾರಣೆ ಮುಂದೂಡಿಕೆ!

Most read

ಮುಸ್ಲಿಂ ಮಹಿಳೆಯರ ವಿರುದ್ಧ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ಭಟ್‌ ನೀಡಿದ್ದ ಅವಹೇಳನ ಹೇಳಿಕೆಯಿಂದಾಗಿ ರಾಜ್ಯಾದ್ಯಂತ ಮಹಿಳೆಯರು ಪ್ರಭಾಕರ್ ಭಟ್ ಅನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು. ಈ ಕುರಿತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಕೇಸ್ ದಾಖಲಿಸಿ FIR ಕೂಡ ಮಾಡಿಸಿದ್ದರು. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಈಗ ಈ ಪ್ರಕರಣ ಶ್ರೀರಂಗಪಟ್ಟಣ ಕೋರ್ಟ್ ಮೆಟ್ಟಿಲೇರಿದ್ದು ಮುಂದಿನ ವಿಚಾರಣೆಯನ್ನು ಜನವರಿ 10 ಮುಂದೂಡಲಾಗಿದೆ.

ಹೌದು, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆಯಾಗಿದ್ದು ಕೋರ್ಟ್ ವಿಚಾರಣೆ ನಡೆದಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ಪರವಾಗಿನ ಸೀನಿಯರ್ ವಕೀಲರು ಹಾಜರಾಗದೇ ಇದ್ದಿದ್ದರಿಂದ ಅವರ ಜ್ಯೂನಿಯರ್ ವಕೀಲರು ಸಮಯ ಕೇಳಿದರು. “ಆರೋಪಿ ವಿರುದ್ದ ಚಾರ್ಜ್ ಶೀಟ್ ಸಿದ್ದವಾಗಿದೆ” ಎಂದು ನ್ಯಾಯಾಧೀಶರು ಎಸ್ ಬಾಲನ್ ಅವರಿಗೆ ತಿಳಿಸಿದರು.

ಪೊಲೀಸ್ ತನಿಖೆಯಲ್ಲಿ ಆರೋಪ ಸಾಬೀತು ಹಿನ್ನಲೆ ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಎಸ್ ಬಾಲನ್, ಚಾರ್ಜ್ ಶೀಟ್ ಹಿನ್ನಲೆಯಲ್ಲಿ ಜಾಮೀನು ರದ್ದು ಮಾಡಬೇಕು ಎಂದು ವಾದ ಮಂಡಿಸಿದ್ದಾರೆ.

ದ್ವೇಷ ಭಾಷಣ ಎನ್ನುವುದು ದೇಶ ಒಡೆಯುವ ಕೃತ್ಯ ಎಂದು ಸುಪ್ರಿಂ ಕೋರ್ಟ್ 2021 ಅಕ್ಟೋಬರ್ 21 ರ ಆದೇಶದಲ್ಲಿ ಹೇಳಿದೆ. ಹಾಗಾಗಿ ಇದು ದೇಶದ್ರೋಹದ ಕೃತ್ಯ” ಎಂದು ಪ್ರಾಥಮಿಕ ವಾದ ಮಂಡಿಸಿದರು.

ವಾದವನ್ನು ಆಲಿಸಿದ ಕೋರ್ಟ್ ವಿಚಾರಣೆಯನ್ನು ಜನವರಿ 10 ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದೆ.

ಮಂಡ್ಯದಲ್ಲಿ ನಡೆಯುತ್ತಿರುವ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಭಾಷಣ ಮಾಡಿದ್ದು, ಅಲೆಕ್ಸಾಂಡರ್ ದೇಶದ ಮೇಲೆ ಆಕ್ರಮಣ ಮಾಡಲು ಬಂದವನು. ನಾಚಿಕೆ ಇಲ್ಲದವರು ಅಲೆಕ್ಸಾಂಡರ್ ಗ್ರೇಟ್ ಅಂತಾರೆ. ಅಲೆಕ್ಸಾಂಡರ್ ಸೋಲಿಸಿದ ಪರಾಕ್ರಮಿಶಾಲಿ ದೇಶ ಭಾರತ. ಪಠ್ಯ ಪುಸ್ತಕಗಳಲ್ಲಿ ನಮಗೆ 90% ಸುಳ್ಳು ಹೇಳಿ ಇಸ್ಲಾಮಿಕರಣ, ಕ್ರಿಶ್ಚಿಯನಿಕರಣ ಮಾಡಲು ಯತ್ನಗಳಾಗಿದೆ ಎಂದು ಆರೋಪಿಸಿದ್ದರು.

ಮಂಡ್ಯದ ಯುವತಿ ಮುಸ್ಕಾನ್‌ಗೆ (Muskan) ಆಲ್ಖೈದಾ ಜತೆ ಸಂಪರ್ಕ ಇದೆ ಎಂದು ಆರ್‌ಎಸ್‌ಎಸ್‌ (RSS) ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸ್ಫೋಟಕ ಆರೋಪ ಮಾಡಿದ್ದಾರೆ. ಮುಸ್ಕಾನ್ ಗೆ ಹಣ, ಶಹಬ್ಬಾಶ್‌ಗಿರಿ ಕೊಟ್ಟದ್ದು ಅಲ್‌ಖೈದಾ ಸಂಘಟನೆ. ಮುಸ್ಕಾನ್ ಆಲ್ಖೈದಾ ಉಗ್ರ ಸಂಘಟನೆ ಜತೆ ಸಂಪರ್ಕದಲ್ಲಿದ್ದಾಳೆ. ಮಂಡ್ಯದ ಜನರು ಮುಸ್ಕಾನ್ ಬಗ್ಗೆ ಹುಷಾರಾಗಿರಬೇಕು. ನಾಳೆಯಿಂದ ಕಾಲೇಜಿಗೆ ಹೋಗುವುದಾಗಿ ಆಕೆ ಹೇಳಿದ್ದಾಳೆ. ತಾಕತ್ ಇದ್ರೆ ಅವಳು ಕಾಲೇಜಿಗೆ ಹೋಗಲಿ, ಮುಸ್ಕಾನ್‌ಗೆ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸವಾಲು ಹಾಕಿದ್ದಾರೆ.

More articles

Latest article