Sunday, September 8, 2024

ತಿರಂಗಾ ಬಾವುಟದ ಮೆರವಣಿಗೆಗಳಿಗೆ ಪೊಲೀಸರು ಉತ್ತೇಜಿಸಬೇಕು: ಕೋಲ್ಕತಾ ಹೈಕೋರ್ಟ್

Most read

ಕಲ್ಕತ್ತಾ: ತ್ರಿವರ್ಣ ಧ್ವಜವು ಭಾರತದ ಪ್ರತಿಯೊಬ್ಬ ಪ್ರಜೆಯ ಹೆಮ್ಮೆ. ರಾಷ್ಟ್ರೀಯ ಅಸ್ಮಿತೆ, ಏಕತೆ ಮತ್ತು ದೇಶಭಕ್ತಿಯನ್ನು ಸಾರುವ ತ್ರಿವರ್ಣ ಧ್ವಜಕ್ಕೆ ಪ್ರಚಾರ ನೀಡಬಲ್ಲ ಮೆರವಣಿಗಳನ್ನು ಉತ್ತೇಜಿಸುವ ಕ್ರಮ ವಹಿಸುವುದು ದೇಶದ ಭದ್ರತಾ ಪಡೆ ಹಾಗೂ ಪೊಲೀಸರ ಆದ್ಯ ಕರ್ತವ್ಯವಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ.

ಉತ್ತರ ಕಲ್ಕತ್ತಾ 24ನೇ ಪರಗಣ ಜಿಲ್ಲೆಯ ಹಸನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ.26 2024ರಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಿರಂಗಾ ರ್ಯಾಲಿ ನಡೆಸಲು ಅನುಮತಿ ಕೋರಿ ಸ್ಥಳೀಯ ಠಾಣೆಗೆ ಅರ್ಜಿ ಬಂದಿತ್ತು. ಸಾರ್ವಜನಿಕರ ಶಾಂತಿಗೆ ಭಂಗವಾಗುವ ಕಾರಣ ನೀಡಿ ಠಾಣೆ ಅನುಮತಿ ನಿರಾಕರಿಸಿತ್ತು. ಠಾಣೆಯ ಈ ನಿರ್ಧಾರವನ್ನು ಪ್ರಶ್ನಿಸಿ ಸಂಜೀವ್ ಸೌ ಎನ್ನುವವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜಶೇಖರ ಮಂತಾ ನೇತೃತ್ವದ ಏಕಸದಸ್ಯ ಪೀಠವು, ತ್ರಿವರ್ಣ ಧ್ವಜದ ಮೆರವಣಿಗೆ ನಡೆಸಲು ಬಯಸುವ ಯಾವುದೇ ವ್ಯಕ್ತಿ ಯಾವುದೇ ಪಕ್ಷಕ್ಕೆ ಸಂಬಂಧಪಟ್ಟವರಾಗಿರುವುದಿಲ್ಲ. ಇಂತಹ ತಿರಂಗಾ ರ್ಯಾಲಿಗಳನ್ನು ಉತ್ತೇಜಿಸುವುದು ಪೊಲೀಸರ “ಬೌಂಡನ್ ಡ್ಯೂಟಿ”(ಆದ್ಯ ಕರ್ತವ್ಯ) ಎಂದು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಆದಾಗಿಯೂ, ಯಾವುದೇ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸುವುದು ಹಾಗೂ ಸಾರ್ವಜನಿಕರ ಹಿತಕ್ಕಾಗಿ ಪೊಲೀಸರು ವಿಧಿಸುವ ಷರತ್ತುಗಳನ್ನು ಪಾಲಿಸುವುದು ಅರ್ಜಿದಾರರ ಜವಾಬ್ದಾರಿಯಾಗಿದೆ ಎಂದು ಪೀಠ ತಿಳಿಸಿದೆ.

More articles

Latest article