Thursday, December 12, 2024

ಇಂದು ನಾಳೆ ಬಸವನಗುಡಿ ಕಡ್ಲೆಕಾಯಿ ಪರಿಷೆ ಆರಂಭ; ವ್ಯಾಪಾರ ಬಲು ಜೋರು

Most read

ಬೆಂಗಳೂರು: ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ನಗರ ಕೂಡಾ ಒಂದಾಗಿದ್ದರೂ ಹಲವಾರು ಸಂಪ್ರದಾಯಗಳನ್ನು ಉಳಿಸಿಕೊಳ್ಳುತ್ತಾ ಬಂದಿದೆ. ಅದರಲ್ಲಿ ಕಡಲೆಕಾಯಿ ಪರಿಷೆ ಮತ್ತು ಕರಗ ಪ್ರಮುಖವಾದವು. ಜತೆಗೆ ಅಲ್ಲಲ್ಲಿ ಊರ ಹಬ್ಬಗಳು ನಡೆಯುತ್ತಲೇ ಇರುತ್ತವೆ.
ಬಸವನಗುಡಿ ಕಡಲೆಕಾಯಿ ಪರಿಷೆ ಇಂದಿನಿಂದ ಆರಂಭವಾಗಲಿದೆ. ಈಗಾಗಲೇ ಎರಡು ದಿನಗಳ ಮೊದಲೇ ಪರಿಷೆ ಆರಂಭವಾಗಿದ್ದು ಕಡಲೆಕಾಯಿ ಮಾರಾಟ ಜೋರಾಗಿದೆ. ವಾರಾಂತ್ಯದ ರಜೆ ಇದ್ದು ಶನಿವಾರ ಭಾನುವಾರ ಸಾರ್ವಜನಿಕರು ಲಗ್ಗೆ ಇಟ್ಟ ದೃಶ್ಯಗಳು ಕಂಡುಬಂದವು.
ಮೈಸೂರು, ತುಮಕೂರು, ಮಂಡ್ಯ, ಕನಕಪುರ, ಮಾಗಡಿ, ಚಿಕ್ಕಬಳ್ಳಾಪುರ, ಕೋಲಾರ ರಾಮನಗರ ದೊಡ್ಡಬಳ್ಳಾಪುರ ಮೊದಲಾದ ಭಾಗಗಳ ವ್ಯಾಪಾರಿಗಳು ಆಗಮಿಸಿದ್ದಾರೆ.


ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆ ಎಂದು ಜನಜನಿತವಾಗಿದ್ದರೂ ಮೂಲತಃ ಸಂಕೇನಹಳ್ಳಿ ಯಲ್ಲಿ ನಡೆಯುವ ಪರಿಷೆ ಇದಾಗಿದೆ.
ಪ್ರತಿ ವರ್ಷ ಕೊನೆಯ ಕಾರ್ತಿಕ ಸೋಮವಾರ ಕಡಲೆಕಾಯಿ ಪರಿಷೆ ಆರಂಭವಾಗುತ್ತದೆ. ವರ್ಷದ ಮೊದಲ ಕಡಲೆಕಾಯಿ ಫಸಲನ್ನು ಶಿವನಿಗೆ ಅರ್ಪಿಸುವುದರ ಜೊತೆಗೆ ತಮ್ಮ ಬೆಳೆಗಳಿಗೆ ಬಸವ ಮತ್ತು ಬೀಡಾಡಿ ದನಗಳ ಕಾಟ ಇರಬಾರದೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತಿತ್ತು.
ಇಂದು ನಂದಿಗೆ ಕಡಲೆಕಾಯಿ ಅಭಿಷೇಕ ಮಾಡಲಾಗುತ್ತದೆ.
ಸಮೀಪದ ಬ್ಯುಗಲ್ ರಾಕ್ ಮತ್ತು ನರಸಿಂಹ ಸ್ವಾಮಿ ಉದ್ಯಾನದಲ್ಲಿ ಇಂದು ನಾಳೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನೀವು ಒಂದೆರಡು ಬಗೆಯ ಕಡಲೆಕಾಯಿ ತಿಂದಿರಬಹುದು. ಈ ಪರಿಷೆಯಲ್ಲಿ ನಿಮಗೆ ಹತ್ತಾರು ಬಗೆಯ ಕಡಲೆಕಾಯಿ ರುಚಿ ನೋಡಬಹುದು. ಕಡ್ಲೆಕಾಯಿಯಲ್ಲಿ ಎಷ್ಟೊಂದು ಬಗೆಯ ತಳಿಗಳಿವೆ, ಎಷ್ಟೊಂದು ವಿವಿಧ ರುಚಿಗಳಿವೆ ಎಂಬುದನ್ನು ಅರಿಯಲು ಈ ಪರಿಷೆಗೆ ಭೇಟಿ ನೀಡಲೇಬೇಕು.
ಇಲ್ಲಿ ಆಟದ
ಮಾಲ್, ಅಥವಾ ಮಲ್ಟಿಪ್ಲೆಕ್ಸ್, ಎಂಜಿ ರಸ್ಟ್, ಬ್ರಿಗೇಡ್ ರಸ್ತೆ ಬಿಡಿ. ಅಲ್ಲಿಯೇ ಇರುತ್ತವೆ. ಪರಿಷೆಯ ಸೊಗಡು ಸವಿಯಿರಿ. ಮಿಸ್ ಮಾಡಿದ್ರೆ ಮತ್ತೆ ಒಂದು ವರ್ಷ ಕಾಯಬೇಕಾದೀತು.

More articles

Latest article