Saturday, July 27, 2024

ನಡೆದಾಡುವ ಕಾಡಿನ ನಿಘಂಟು ಕೆ ಎಂ ಚಿಣ್ಣಪ್ಪ ನಿಧನ

Most read

ಮಡಿಕೇರಿ : ಪರಿಸರವಾದಿ, ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರಾಗಿದ್ದ ಕೊಡಗಿನ ಕೆ.ಎಂ. ಚಿಣ್ಣಪ್ಪ ಅವರು ಇಂದು ಬೆಳಗ್ಗೆ ಅವರ ಸ್ವಗೃಹದಲ್ಲಿ ನಿಧರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

1941 ರಲ್ಲಿ ಕೆ ಎಂ ಚಿಣ್ಣಪ್ಪ ದಕ್ಷಿಣ ಕೊಡಗಿನ ಕುಮಟೂರು ಎಂಬ ಗ್ರಾಮದಲ್ಲಿ ಜನಿಸಿದ ಇವರು, 1967 ರಲ್ಲಿ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅರಣ್ಯ ರೇಂಜ್‌ ಆಫೀಸರ್‌ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ನಾಗರಹೊಳೆ ಅರಣ್ಯಾಧಿಕಾರಿಯಾಗಿ ಅರಣ್ಯ ಉಳಿಸುವುದಕ್ಕಾಗಿ ಅವಿರತವಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ರಾಜ್ಯಸರ್ಕಾರ 1985 ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ನೀಡಿ ಗೌರವಿಸಿದೆ.

ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಕಳಸಾಗಣಿಕ, ಗಾಂಜಾ ಬೆಳೆಯುವುದು, ಬೇಟೆಯಾಡುವುದು ಹೀಗೆ ಅನೇಕ ಅಪರಾಧ ಕೃತ್ಯಗಳನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಸೇರಿದಂತೆ ನಾಡಿನ ಪ್ರಮುಖರು ಇವರ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ.

More articles

Latest article