ಸಮೀಕ್ಷೆಯಿಂದ ನಿಮ್ಮ ಹಿಂದೂ ಧರ್ಮ ಮತಾಂತರವಾಗುವಷ್ಟು ದುರ್ಬಲವೇ?: ಪ್ರಹ್ಲಾದ ಜೋಶಿಗೆ ಪ್ರಿಯಾಂಕ್‌  ಪ್ರಶ್ನೆ

Most read

ಬೆಂಗಳೂರು: ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯು ಮತಾಂತರಕ್ಕೆ ಪ್ರೋತ್ಸಾಹಿಸುತ್ತದೆ ಎಂದಿರುವ ಶ್ರೀ Pralhad Joshi ಅವರೇ, ನಿಮ್ಮ ಪಕ್ಷದ ನಾಯಕರು ಕುಟುಂಬ ಸಮೇತ ಮತಾಂತರವಾಗಿದ್ದಾರೆ ಎಂದು ನಿಮ್ಮದೇ ಪಕ್ಷದವರು ತಿಳಿಸಿದ್ದರು.

ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಅವರು ಈ ಪ್ರಶ್ನೆ ಎತ್ತಿದ್ದಾರೆ.

ಇವರ ಮತಾಂತರಕ್ಕೆ ಪ್ರೇರಣೆಯಾದ ಸಂಗತಿ ಯಾವುದು? ನಿಮ್ಮ ಪಕ್ಷದವರಿಗಾಗಿ “ಘರ್ ವಾಪಸಿ“ ಕಾರ್ಯಕ್ರಮ ಹಮ್ಮಿಕೊಳ್ಳುವಿರಾ, ಚಿಂತಿಸಿ!

ಜೋಶಿಯವರೇ, ಸಮೀಕ್ಷೆಯಿಂದ ಮತಾಂತರವಾಗಲು ಸಾಧ್ಯವೇ? ನಿಮ್ಮ ಪ್ರಕಾರ ಹಿಂದೂ ಧರ್ಮ ಅಷ್ಟೊಂದು ದುರ್ಬಲವೇ?

ಜೋಶಿಯವರಿಗೆ ತಿಳಿದಿರಲಿ, ಜನರಿಗೆ ಬೇಕಿರುವುದು ಮ್ಯಾಜಿಕ್ ಮಾತುಗಳಲ್ಲ, ಲಾಜಿಕ್ ಮಾತುಗಳು!

More articles

Latest article