ಜುಲೈ 1ರಿಂದ ರೈಲ್ವೆ ಪ್ರಯಾಣ ದರದಲ್ಲಿ ಅಲ್ಪ ಏರಿಕೆ: ರೈಲ್ವೆ ಇಲಾಖೆ

Most read

ನವದೆಹಲಿ: ಜುಲೈ 1 ರಿಂದ ಜಾರಿಗೆ ಬರುವಂತೆ ಎಸಿ ಮತ್ತು ನಾನ್ ಎಸಿ , ಎಕ್ಸ್‌ ಪ್ರೆಸ್ ಮತ್ತು ದ್ವಿತೀಯ ದರ್ಜೆಯ ರೈಲ್ವೆ ಟಿಕೆಟ್‌ ಗಳ ದರ ಏರಿಕೆಯಾಗಲಿದೆ.  ಅಲ್ಪ ಪ್ರಮಾಣದ ಏರಿಕೆ ಮಾಡುತ್ತಿರುವುದಾಗಿ ಭಾರತೀಯ ರೈಲ್ವೆಯು ತಿಳಿಸಿದೆ.

ಎಸಿ ಅಲ್ಲದ ಮತ್ತು ಎಕ್ಸ್‌ ಪ್ರೆಸ್ ರೈಲುಗಳ ದರದಲ್ಲಿ ಪ್ರತಿ ಕಿ.ಮೀ.ಗೆ ಕನಿಷ್ಠ 1 ಪೈಸೆ ಹೆಚ್ಚಳ ಮತ್ತು ಎಸಿ ದರ್ಜೆಯ ಟಿಕೆಟ್‌ಗಳ ದರದಲ್ಲಿ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಬ್-ಅರ್ಬನ್ ರೈಲು ಪ್ರಯಾಣ ದರ ಮತ್ತು ಮಾಸಿಕ ಪಾಸ್ ದರದಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ. ಎರಡನೇ ದರ್ಜೆಯ ಸಾಮಾನ್ಯ ಟಿಕೆಟ್‌ ದರದಲ್ಲಿ 500 ಕಿ.ಮೀ ವರೆಗೆ ಯಾವುದೇ ಹೆಚ್ಚಳ ಇರುವುದಿಲ್ಲ. 500 ಕಿ.ಮೀ ನಂತರ, ಎರಡನೇ ದರ್ಜೆಯ ಸಾಮಾನ್ಯ ಟಿಕೆಟ್‌ ದರದಲ್ಲಿ ಪ್ರತಿ ಕಿ.ಮೀ.ಗೆ ಅರ್ಧ ಪೈಸೆ ಹೆಚ್ಚಳವಾಗಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಪ್ರಯಾಣಿಕರಿಗೆ, ವಿಶೇಷವಾಗಿ ಸಾಮಾನ್ಯ ಪ್ರಯಾಣಿಕರಿಗೆ ಮತ್ತು ಕಡಿಮೆ ದೂರ ಪ್ರಯಾಣಿಸುವವರಿಗೆ ಹೊರೆಯಾಗದಂತೆ ಕಾರ್ಯಾಚರಣೆಯ ವೆಚ್ಚವನ್ನು ನಿರ್ವಹಿಸಲು ಭಾರತೀಯ ರೈಲ್ವೆಯ ನಿರಂತರ ಪ್ರಯತ್ನಗಳ ಭಾಗವಾಗಿ ಈ ಪರಿಷ್ಕರಣೆ ಮಾಡಲಾಗುತ್ತಿದೆ.

More articles

Latest article