ಪ್ರಾದೇಶಿಕ ಅಸಮತೋಲನ ನಿವಾರಿಸುವ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಪ್ರತಿ ವರ್ಷ 5000 ಕೋಟಿ ಒದಗಿಸುತ್ತಿದೆ. ಆರಂಭಿಕ ಶಿಲ್ಕನ್ನು ಒಳಗೊಂಡಂತೆ ರೂ.1470ಕೋಟಿಗಳು ವೆಚ್ಚವಾಗಿದ್ದು, 2024 ರ ಡಿಸೆಂಬರ್ ಅಂತವರೆಗೆ3222 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳುವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತವೆ. ಸರ್ಕಾರವು ಕಲ್ಬುರ್ಗಿಯಲ್ಲಿ ಐತಿಹಾಸಿಕವೆನ್ನಿಸುವ ಸಚಿವಸಂಪುಟ ಸಭೆಯನ್ನು ನಡೆಸಿ 11770 ಕೋಟಿ ರೂ.ಗಳಿಗೂ ಹೆಚ್ಚಿನಮೊತ್ತದ ಯೋಜನೆ, ಕಾಮಗಾರಿಗಳಿಗೆ ಅನುಮೋದನೆ ನೀಡಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿನ ಖಾಲಿ ಹುದ್ದೆಗಳ ನೇಮಕಾತಿ,ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಅಭಿವೃದ್ಧಿ, ನೂತನನ್ಯಾಯಾಲಯ ಸಂಕೀರ್ಣ ನಿರ್ಮಾಣ, ಪ್ರವಾಸೋದ್ಯಮಅಭಿವೃದ್ಧಿ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕಆ ಭಾಗದ ಸಮಗ್ರ ಅಭಿವೃದ್ಧಿಗೆ ಮುಂದಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವರ್ಧನೆಗಾಗಿ ಹಲವಾರುಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ಕರ್ನಾಟಕ ಸಂಭ್ರಮ-50ರಅಂಗವಾಗಿ ದಿನಾಂಕ: 01.11.2024 ರಂದು “ಹೆಸರಾಯಿತುಕರ್ನಾಟಕ ಉಸಿರಾಗಲಿ ಕನ್ನಡ ಸಮಾರಂಭದಲ್ಲಿ 50 ಪುರುಷಮತ್ತು 50 ಮಹಿಳಾ ಸಾಧಕರಿಗೆ ಸುವರ್ಣ ಮಹೋತ್ಸವಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಿನಾಂಕ: 27.01.2025 ರಂದು ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಕರ್ನಾಟಕದ ಎಲ್ಲಾ ಕಛೇರಿಗಳು, ಅಂಗಡಿ-ಮುಂಗಟ್ಟುಗಳು, ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಜಾರಿಗೊಳಿಸಲಾಗಿದೆ. ಮೈಸೂರಿನಲ್ಲಿ “ಸಾಂಸ್ಕೃತಿಕ ಮುನ್ನೋಟ ಚಿಂತನಾ ಸಮಾವೇಶ”, ಮಹಾರಾಷ್ಟ್ರದ ಸಾಂಗಿ ಜಿಲ್ಲೆಯ ಜತ್ತ ತಾಲ್ಲೂಕಿನ ಗುಡ್ಡಾಪುರದಲ್ಲಿ “ಗಡಿ ನಾಡ ಸಮಾವೇಶ ಮತ್ತು ರಾಯಚೂರಿನಲ್ಲಿ “ಗೋಕಾಕ್ ಚಳುವಳಿಯ ಹಿನ್ನೋಟ ಮುನ್ನೋಟ” ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. 2024-25ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳಡಿ 2491 ಕಿ.ಮೀ. ರಾಜ್ಯ ಹೆದ್ದಾರಿಗಳು ಮತ್ತು 3103 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ, ನವೀಕರಣ ಮತ್ತು 190 ಸಂಖ್ಯೆ ಸೇತುವೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ.
ಎಚ್.ಎಸ್.ಡಿ.ಪಿ. ಹಂತ-5 ಅಡಿಯಲ್ಲಿ ಒಟ್ಟು ರೂ. 9000 ಕೋಟಿ ಮೊತ್ತದಲ್ಲಿ 2500 ಕಿ.ಮೀ. ಹೆದ್ದಾರಿಗಳ ಅಭಿವೃದ್ಧಿಯನ್ನು 2 ಘಟ್ಟಗಳಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಜ್ಯವ್ಯಾಪಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕೆ ರೂ.4000 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸಿಐಆಎಫ್ ಯೋಜನೆಯಡಿ ರೂ.1385 ಕೋಟಿ ಮೊತ್ತದಲ್ಲಿ 2056 ಕಿ.ಮೀ. ರಾಜ್ಯದ 295 ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. 33 101. ನನ್ನ ಸರ್ಕಾರವು ಹೈಬ್ರಿಡ್ ವರ್ಷಾಶನ ಮಾದರಿ (HAM) ಯಲ್ಲಿ ರಾಯಚೂರು ಬಳಿಯ ಕಲಾ ಜಂಕ್ಷನ್ನಿನಿಂದ ಸಿಂಧನೂರಿನವರೆಗಿನ 78.45 ಕಿ.ಮೀ. ರಾಜ್ಯ ಹೆದ್ದಾರಿಯ ಅಭಿವೃದ್ಧಿ ರೂ.1696 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿದೆ.
ಸರ್ಕಾರದ ಮಹತ್ಯಾಕಾಂಕ್ಷಿ ಯೋಜನೆಯಾದ “ಶಕ್ತಿ ಯೋಜನೆಯು ಮಹಿಳೆಯರನ್ನು ಸಬಲೀಕರಣದ ಕಡೆಗೆ ಮುನ್ನಡೆಸುತ್ತದೆ. ಸದರಿ ಯೋಜನೆ ಪ್ರಾರಂಭವಾದಾಗಿನಿಂದ ದಿನಾಂಕ:17.01.2025ರವರೆಗೆ ರಾಜ್ಯದ ಸುಮಾರು 376.70 ಕೋಟಿ ಫಲಾನುಭವಿಗಳು ಶಕ್ತಿ ಯೋಜನೆಯ ಪ್ರಯೋಜನ ಪಡೆದಿರುತ್ತಾರೆ. ಈ ಉದ್ದೇಶಕ್ಕಾಗಿ ಸರ್ಕಾರ ರೂ.8215 ಕೋಟಿ ಅನುದಾನವನ್ನು ಹಂಚಿಕೆ ಮಾಡಿದೆ. 103. 2024-25ನೇ ಸಾಲಿನ ಜನವರಿ-2025 ರ ಅಂತ್ಯಕ್ಕೆ ಒಟ್ಟಾರೆ 4889 ರಷ್ಟು ವಿವಿಧ ಮಾದರಿಯ ಹೊಸ ಬಸ್ಸುಗಳನ್ನು ಸಾರ್ವಜನಿಕರ ಸಂಚಾರಕ್ಕೆ ಒದಗಿಸಲಾಗಿದೆ. ರಾಜ್ಯದ ಸಾರ್ವಜನಿಕ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಅಪಘಾತದಿಂದ ಮರಣ ಹೊಂದಿದ ಪ್ರಯಾಣಿಕರ ಅವಲಂಬಿತರಿಗೆ ನೀಡಲಾಗುತ್ತಿದ್ದ ಆರ್ಥಿಕಪರಿಹಾರ ಮೊತ್ತವನ್ನು ರೂ.3 ಲಕ್ಷದಿಂದ ರೂ.10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ನಿಗಮದ ನೌಕರರ ಬಹುದಿನದ ಬೇಡಿಕೆಯಾದ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯನ್ನು ವಾಯವ್ಯ ಕರ್ನಾಟಕರಸ್ತೆ ಸಾರಿಗೆ ಸಂಸ್ಥೆಯು ಆಯ್ದ ಆಸ್ಪತ್ರೆಗಳೊಂದಿಗೆ ಮೂರು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಂಡಿರುತ್ತದೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಗದು ರಹಿತವೈದ್ಯಕೀಯ ಚಿಕಿತ್ಸಾ ಯೋಜನೆಯ ಅನುಷ್ಠಾನಕ್ಕೆ ಕ್ರಮ34 ಕೈಗೊಳ್ಳಲಾಗಿದ್ದು, “ಕೆ.ಎಸ್.ಆರ್.ಟಿ.ಸಿ.-ಆರೋಗ್ಯ ಯೋಜನೆಗೆ ಚಾಲನೆ ನೀಡಲಾಗಿದೆ. 2024-25ನೇ ಸಾಲಿನ ಆಯವ್ಯಯದಲ್ಲಿ ಜಲಸಂಪನ್ಮೂಲ ಇಲಾಖೆಗೆ ಒಟ್ಟು ರೂ.16837 ಕೋಟಿ ಅನುದಾನ ಒದಗಿಸಿದೆ ಮತ್ತು 36,799 ಎಕರೆ ನೀರಾವರಿ ಸಾಮರ್ಥ್ಯವನ್ನು ಕಲ್ಪಿಸಲಾಗಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತದಲ್ಲಿ Lift & Power Supply ಕಾಮಗಾರಿಗಳನ್ನು ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡಲಾಗಿದೆ.
ಸರ್ಕಾರವು ರಾಜ್ಯದಲ್ಲಿ ಬಾಕಿ ಇರುವ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪ್ರಾರಂಭಿಸಲು ಬದ್ಧವಾಗಿದೆ. ಕೆಲವು ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದ್ದು ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡುತ್ತಿದೆ. ಸಣ್ಣ ನೀರಾವರಿ ಇಲಾಖೆ ವತಿಯಿಂದ ಪ್ರಸ್ತುತ 5847 ಹೆಕ್ಟೇರ್ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸಿದೆ. 165 ಬ್ಯಾರೇಜ್ಗಳನ್ನು ನಿರ್ಮಿಸಲಾಗಿದೆ. ಲಕ್ಷ್ಮಣ ತೀರ್ಥ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಚಿಲ್ಕುಂದ ಮತ್ತು ಇತರೆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 14 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂ.19 ಕೋಟಿ ಮೊತ್ತದಲ್ಲಿ ಕೈಗೊಂಡಿದ್ದು, ಯೋಜನೆಯನ್ನು ಪ್ರಾಯೋಗಿಕವಾಗಿ ಚಾಲನೆಗೊಳಿಸಿದೆ.
ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕು ಐಚನಹಳ್ಳಿ ಹಾಗೂ ಇತರೆ 50 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯನ್ನು ರೂ.265.29 ಕೋಟಿ ಮೊತ್ತದಲ್ಲಿ ಕೈಗೊಂಡಿದ್ದು, 1ನೇ ಹಂತದ ಯೋಜನೆಯನ್ನು ಪ್ರಾಯೋಗಿಕವಾಗಿ ಚಾಲನೆಗೊಳಿಸಿದೆ. ಸ್ವಾತಂತ್ರ್ಯ ಹೋರಾಟದ ಗತಿಯನ್ನು ತೀವ್ರಗೊಳಿಸಲು 1924 ಡಿಸೆಂಬರ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯದ ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮದ ಆಚರಣೆಯನ್ನು ನನ್ನ ಸರ್ಕಾರ ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಆಯೋಜಿಸಿತ್ತು. ಗಾಂಧೀಜಿಯವರ ಮೌಲ್ವಿಕ ತತ್ವಗಳನ್ನು ರಾಜ್ಯಾದ್ಯಂತ ಪ್ರಚುರಪಡಿಸಲು ಮತ್ತು ಇಂದಿನ ಪೀಳಿಗೆಗೆ ಗಾಂಧೀಜಿಯವರ ತತ್ವಾದರ್ಶಗಳ ಕುರಿತು ಅರಿವು ಮೂಡಿಸಲು ಜನಮಾನಸದಲ್ಲಿ ಗಾಂಧೀಜಿಯವರ ತತ್ವಗಳು ಇಂದಿಗೂ ಪ್ರಸ್ತುತ ವೆಂಬ ಅಂಶವನ್ನು ನಾಡಿನ ಜನತೆಗೆ ಮನದಟ್ಟು ಮಾಡಲು ವರ್ಷವಿಡೀ ರಾಜ್ಯದಾದ್ಯಂತ “ಗಾಂಧೀ ಭಾರತ ಹೆಸರಿನಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ನಾಡಿನ ಮನೆ-ಮನೆಗೆ ಮನ ಮುಟ್ಟುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.
ಕರ್ನಾಟಕ ಸರ್ಕಾರದ ದೃಷ್ಟಿಕೋನವನ್ನು ಸಾಧಿಸುವ ಉದ್ದೇಶದಿಂದ ಪ್ರವಾಸೋದ್ಯಮ ನೀತಿ 2024-2029 ಅನ್ನು ರೂಪಿಸಲಾಗಿದೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯನ್ನು ಸುಗಮಗೊಳಿಸಲು ಕಾರ್ಯತಂತ್ರದ ಮಧ್ಯಸ್ಥಿಕೆಗಳು, ಆಕರ್ಷಕಪ್ರೋತ್ಸಾಹಗಳು ಮತ್ತು ಅಗತ್ಯ ನಿಯಂತ್ರಕ ಸುಧಾರಣೆಗಳನ್ನು ನೀತಿಯು ಪ್ರಸ್ತಾಪಿಸುತ್ತದೆ. ಆರಾಮದಾಯಕ ಮತ್ತು ಸುಸ್ಥಿರ ಪ್ರವಾಸೋದ್ಯಮ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವತ್ತ ನಿರಂತರವಾಗಿ ಶ್ರಮಿಸುತ್ತಿರುವ ಈ ನೀತಿಯು ಪ್ರವಾಸಿಗರಿಗೆಸುರಕ್ಷಿತ ಮತ್ತು ಉತ್ತಮ-ಗುಣಮಟ್ಟದ ಅನುಭವವನ್ನು ಮತ್ತು ಕರ್ನಾಟಕದ ಜನರಿಗೆ ಹೆಚ್ಚಿನ ಸಮ್ಮದ್ಧಿ ಮತ್ತು ಸಂತೋಷವನ್ನು ಒದಗಿಸುವತ್ತ ಒತ್ತು ನೀಡುತ್ತದೆ. ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಚ್ಯಾವಶೇಷಗಳ ಸಂಗ್ರಹಣಾ ಅಭಿಯಾನದಲ್ಲಿ ಸಂಗ್ರಹಿಸಲಾದ 1000ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಸಾರ್ವಜನಿಕರ ವೀಕ್ಷಣೆ, ಅಧ್ಯಯನ ಮತ್ತು ಸಂಶೋಧನೆಗಾಗಿ ಅಂತರರಾಷ್ಟ್ರೀಯ ಮಟ್ಟದ ಬಯಲು ವಸ್ತುಸಂಗ್ರಹಾಲಯ ನಿರ್ಮಿಸಲು ಉದ್ದೇಶಿಸಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲು ದಾಪುಗಾಲನ್ನಿಡಲಾಗಿದೆ. ಈ ಕ್ಷೇತ್ರದಲ್ಲಿ ಭಕ್ತರು ದೇವಿಯ ದರ್ಶನವನ್ನು ಸುಗಮವಾಗಿ ಮಾಡಲು ಅನುಕೂಲವಾಗುವಂತೆ ತಿರುಪತಿ ಮಾದರಿಯಲ್ಲಿ ಸರದಿ ಸಾಲಿನ ಸಂಕೀರ್ಣವನ್ನು (Queue complex) ಆದ್ಯತೆಯ ಮೇಲೆ ನಿರ್ಮಾಣ ಮಾಡಲು ಮತ್ತು ಭಕ್ತಾದಿಗಳು ಸ್ವತ: ಅಡುಗೆ ಮಾಡಿಕೊಳ್ಳುವುದರಿಂದ ಅಲ್ಲಿ 500 ಚಿಕ್ಕ ಹೊರವಲಯದ ಅಡುಗೆ ಮನೆಗಳನ್ನು ಮತ್ತು ಗೌರವ ಘಟಕ (ಶೌಚಾಲಯ) ಗಳನ್ನು ನಿರ್ಮಿಸಲು ರೂ.200 ಕೋಟಿಗಳ ಅಂದಾಜು ವೆಚ್ಚದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ. ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ರೋಪ್-ವೇ ನಿರ್ಮಾಣ ಮಾಡಲು ಪ್ರಸ್ತಾಪಿಸಲಾಗಿದೆ.
ದೇವಿಕಾ ರಾಣಿ ನಿಕೋಲಾಸ್ ರೋರಿಚ್ 572 ಎಕರೆ ಎಸ್ಟೇಟ್ನ್ನು ಪ್ರವಾಸಿಗರ ಆಕರ್ಷಣೆಗೆ ಮತ್ತು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರದ SASC ಯೋಜನೆಯಡಿಯಲ್ಲಿ ರೂ.100 ಕೋಟಿಗಳ ಅನುದಾನವನ್ನು ಬಳಕೆ ಮಾಡಿಕೊಳ್ಳುವುದರ 37 ಜೊತೆಗೆ ಕರ್ನಾಟಕ ಸರ್ಕಾರವು ಸಹ ತನ್ನ ವಿಶೇಷ ಅನುದಾನದಮೂಲಕ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳುತ್ತದೆ.
ರಾಜ್ಯದಲ್ಲಿ ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನುಸುವ್ಯವಸ್ಥೆಯ ಸಮಸ್ಯೆಗಳು ಉದ್ಭವಿಸಿಲ್ಲ, ಪೊಲೀಸ್ ಠಾಣೆಗಳುಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಡೀದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯಪೊಲೀಸ್ ಇಲಾಖೆಯು ನಿರಂತರವಾಗಿ ಜಾಗೃತಿ ಮೂಡಿಸಿಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ.ಹಾಗಾಗಿ ಈ ಪ್ರಕರಣಗಳಲ್ಲೂ ಇಳಿಕೆ ಕಾಣುತ್ತಿದೆ.
ಪೊಲೀಸ್ ಇಲಾಖೆಗೆ ಅಗತ್ಯವಿರುವ ಸಂಪನ್ಮೂಲಗಳನ್ನುಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 26 ಸುಸಜ್ಜಿತ ಪೊಲೀಸ್ಠಾಣೆಗಳು ಹಾಗೂ 2016 ವಸತಿ ಗೃಹಗಳನ್ನು ನಿರ್ಮಿಸಲುಆದ್ಯತೆ ನೀಡಲಾಗಿದೆ. 115. ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ನಿಮಿತ್ತ ಜಿಲ್ಲಾ ವ್ಯಾಪ್ತಿಯಲ್ಲಿಸಂಚರಿಸಲು ಬಸ್ ಪಾಸ್ ವಿತರಿಸುವ ಯೋಜನೆಯನ್ನು ಸಾರಿಗೆಇಲಾಖೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗಿದೆ. ನನ್ನ ಸರ್ಕಾರವು ತನ್ನ ಪರಿಮಿತ ಆರ್ಥಿಕ ಸಂಪನ್ಮೂಲಗಳಆಧಾರದ ಮೇಲೆಯೇ ಇಷ್ಟೆಲ್ಲ ಸಾಧನೆಗಳನ್ನು ಮಾಡಿದೆ. ಏಳನೇವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದಿದೆ.
ನನ್ನ ಸರ್ಕಾರವು ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತುಸಾಂಸ್ಕೃತಿಕವೂ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಹಲವಾರುಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ.38 ಸಂವಿಧಾನದ ಆಶಯಗಳಿಗೆ ಪೂರಕವಾಗಿ ಜನ ಕಲ್ಯಾಣವನ್ನೆ ಪ್ರಧಾನ ಧೈಯವಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ. ಸರ್ವರ ಶಾಂತಿ, ಸರ್ವರ ಅಭ್ಯುದಯವೆ ಸಂವಿಧಾನದ ಆಶಯ. ಈ ಆಶಯವನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ.