“ಗುಜರಾತ್ ನಲ್ಲಿ ಸುಮಾರು 30 ಸಣ್ಣ ವ್ಯಾಪಾರಿಗಳು ನಮ್ಮ ಬಳಿ ಬಂದರು. ನೋಟು ನಿಷೇಧ ಮತ್ತು ಜಿ ಎಸ್ ಟಿ ಯ ಉದ್ದೇಶ ಏನಾಗಿತ್ತು ಎಂದು ನಾನು ಅವರಲ್ಲಿ ಕೇಳಿದೆ. ನೋಟು ನಿಷೇಧ ಮತ್ತು ಜಿ ಎಸ್ ಟಿ ತಂದ ಉದ್ದೇಶ ಸಣ್ಣ ವ್ಯಾಪಾರಿಗಳನ್ನು ಮುಗಿಸಿಬಿಡುವುದೇ ಆಗಿತ್ತು ಎಂದು ಅವರು ಹೇಳಿದರು” – ರಾಹುಲ್ ಗಾಂಧಿ
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯು ಗುಜರಾತ್ ರಾಜ್ಯದಲ್ಲಿ ಮುಂದುವರಿಯಿತು. 10.03.2024 ರಂದು ಗುಜರಾತ್ ನಲ್ಲಿ ಯಾತ್ರೆಯ ಕೊನೆಯ ದಿನವಾಗಿತ್ತು. ಇಂದು (11.03.2024) ರಜಾ ದಿನ. ನಾಳೆ ಅಂದರೆ 12. 03. 2024 ರಿಂದ ಯಾತ್ರೆಯು ಮಹಾರಾಷ್ಟ್ರದ ನಂದರ್ಬಾರ್ ನಿಂದ ಮುಂದುವರಿಯಲಿದೆ.
10.03.2024 ರ ಯಾತ್ರೆಯ ಕಾರ್ಯಕ್ರಮಗಳು ಹೀಗಿದ್ದವು. ಬೆಳಿಗ್ಗೆ 8.30 ಕ್ಕೆ ಗುಜರಾತ್ ಸೂರತ್ ನ ಮಾಂಡವಿಯಿಂದ ಯಾತ್ರೆ ಪುನರಾರಂಭ. ಮಾಂಡವಿ ಬಸ್ ಸ್ಟಾಂಡ್ ಚೌರಾಹದಲ್ಲಿ ಸ್ವಾಗತ ಕಾರ್ಯಕ್ರಮ. ಬಾರ್ಡೋಲಿಯ ಅಮರ್ ಚೌಕದಲ್ಲಿ ಸ್ವಾಗತ ಕಾರ್ಯಕ್ರಮ. ಬಾರ್ಡೋಲಿಯ ಸರ್ದಾರ್ ಚೌಕದಲ್ಲಿ ಸಾರ್ವಜನಿಕ ಭಾಷಣ. ಹಳೆ ಬಸ್ ಸ್ಟಾಂಡ್ ವ್ಯಾರಾದಲ್ಲಿ ಸ್ವಾಗತ ಕಾರ್ಯಕ್ರಮ ಮತ್ತು ಸಾರ್ವಜನಿಕ ಭಾಷಣ. ಗುಜರಾತ್ ವ್ಯಾರಾದ ರಾಜಸ್ತಾನ ಮಾರ್ಬಲ್ ಬಳಿ ಮುಂಜಾನೆಯ ವಿರಾಮ ಮತ್ತು ಮಧ್ಯಾಹ್ನದ ಭೋಜನದ ವಿರಾಮ.
ಯಾತ್ರೆಯ ಸಮಯ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಗುಜರಾತ್ ನಲ್ಲಿ ಸುಮಾರು 30 ಸಣ್ಣ ವ್ಯಾಪಾರಿಗಳು ನಮ್ಮ ಬಳಿ ಬಂದರು. ನೋಟು ನಿಷೇಧ ಮತ್ತು ಜಿ ಎಸ್ ಟಿ ಯ ಉದ್ದೇಶ ಏನಾಗಿತ್ತು ಎಂದು ನಾನು ಅವರಲ್ಲಿ ಕೇಳಿದೆ. ನೋಟು ನಿಷೇಧ ಮತ್ತು ಜಿ ಎಸ್ ಟಿ ತಂದ ಉದ್ದೇಶ ಸಣ್ಣ ವ್ಯಾಪಾರಿಗಳನ್ನು ಮುಗಿಸಿಬಿಡುವುದೇ ಆಗಿತ್ತು ಎಂದು ಅವರು ಹೇಳಿದರು.
ನಾವು ಎರಡು ಕೆಲಸ ಮಾಡುವವರಿದ್ದೇವೆ. ಮೊದಲನೆಯದಾಗಿ ಜಾತಿ ಗಣತಿ, ಎರಡನೆಯದಾಗಿ ಆರ್ಥಿಕ ಸಮೀಕ್ಷೆ. ದೇಶದ ಸಂಸ್ಥೆಗಳಲ್ಲಿ ತಮ್ಮ ಭಾಗೀದಾರಿಕೆ ಎಷ್ಟಿದೆ ಎನ್ನುವುದು ಜನರಿಗೆ ತಿಳಿಯಬೇಕು. ಅವರ ಕೈಯಲ್ಲಿ ದೇಶದ ಎಷ್ಟು ಹಣ ಇದೆ ಎನ್ನುವುದು ತಿಳಿಯಬೇಕು. ಇದು ಆದ ನಂತರವಷ್ಟೇ ನೀವು ನಿಮ್ಮ ಹಕ್ಕು ಕೇಳುವುದು ಸಾಧ‍್ಯವಾಗುತ್ತದೆ. ಭಾರತದಲ್ಲಿ ಮೊದಲು ಜನರು ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸುತ್ತಿದ್ದರು. ಅಲ್ಲಿ ಸೇನಾ ಜವಾನರಿಗೆ ಗೌರವ ಸಿಗುತ್ತಿತ್ತು. ಆದರೆ ಅಗ್ನಿವೀರ ಯೋಜನೆ ಬಂದ ಮೇಲೆ ಸೈನಿಕರ ನಡುವೆ ತರತಮ ಭಾವ ಉಂಟಾಯಿತು. ಹಿಂದೆ ಸೇನೆಯ ಕೇಂದ್ರಗಳು ಜನರಿಂದ ತುಂಬಿ ತುಳುಕುತ್ತಿತ್ತು. ಈಗ ಖಾಲಿ ಬಿದ್ದಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಗ್ಯಾರಂಟಿ ನೀಡಲಾಗುವುದು. ಇದು ಜುಮ್ಲಾ ಅಲ್ಲ. ಇದು ಕಾಂಗ್ರೆಸ್ ಗ್ಯಾರಂಟಿ” ಎಂದು ಅವರು ಹೇಳಿದರು.
ಶ್ರೀನಿವಾಸ ಕಾರ್ಕಳ
ಯಾತ್ರೆ – 56 – ಭಾರತ್ ಜೋಡೋ ನ್ಯಾಯ ಯಾತ್ರೆ | 56ನೆಯ ದಿನ