ಜಾರ್ಖಂಡ್ ನೂತನ ಸಿಎಂ ಕಲ್ಪನಾ ಸೋರೆನ್ ಆಗಬಹುದು : ಬಿಜೆಪಿ ನಾಯಕ ನಿಶಿಕಾಂತ್ ದುಬೆ

ಇಡಿ ದಾಳಿಗೆ ಹೆದರಿ ತಲೆಮರೆಸಿಕೊಂಡಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸ್ಥಾನವನ್ನು ಕಲ್ಪನಾ ಸೋರೆನ್ ವಹಿಸಿಕೊಳ್ಳಬಹುದು ಎಂದು ಬಿಜೆಪಿ ನಾಯಕ ನಿಶಿಕಾಂತ್ ದುಬೆ ಸೋಮವಾರ ಹೇಳಿದ್ದಾರೆ.

ಸೊರೆನ್ ಅವರು ತಮ್ಮ ಪಕ್ಷವಾದ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಇತರ ಮಿತ್ರಪಕ್ಷಗಳ ಶಾಸಕರನ್ನು ತಮ್ಮ ಲಗೇಜ್ ಗಳೊಂದಿಗೆ ರಾಂಚಿಗೆ ಬರಲು ಕರೆದಿದ್ದಾರೆ ಎಂದು ಹೇಳಿದರು.

ಭೂ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಸೋರೆನ್ ಅವರನ್ನು ಪ್ರಶ್ನಿಸಲು ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸೋರೆನ್ ಅವರ ಮನೆಗೆ ಭೇಟಿ ನೀಡಿ 13 ಗಂಟೆಗಳ ಕಾಲ ಅಲ್ಲಿಯೇ ಮೊಕ್ಕಾಂ ಹೂಡಿದ ನಂತರ ಬಿಜೆಪಿ ನಾಯಕರ ಹೇಳಿಕೆ ಬಂದಿದೆ.

‘ಎಕ್ಸ್‌’ನಲ್ಲಿನ ಪೋಸ್ಟ್‌ ಮಾಡಿರುವ ನಿಶಿಕಾಂತ್ ದುಬೆ ‘ಹೇಮಂತ್ ಸೊರೆನ್ ಅವರು ತಮ್ಮ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ಮಿತ್ರಪಕ್ಷದ ಶಾಸಕರುಗಳನ್ನು ಲಗೇಜ್ ಗಳೊಂದಿಗೆ ರಾಂಚಿಗೆ ಕರೆದಿದ್ದಾರೆ. ಮಾಹಿತಿಯ ಪ್ರಕಾರ, ಕಲ್ಪನಾ ಸೋರೆನ್ ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಸ್ತಾಪವಿದೆ. ಹಾಲಿ ಮುಖ್ಯಮಂತ್ರಿಗಳು ಇಡಿಯವರು ಪ್ರಶ್ನಿಸುವ ಭಯದಿಂದಾಗಿ ಇಂದು ರಸ್ತೆಯಲ್ಲಿದ್ದಾರೆ ಮತ್ತು ರಾಂಚಿ ತಲುಪಿದ ನಂತರ ಅವರ ಆಗಮನವನ್ನು ಪ್ರಕಟಿಸುತ್ತಾರೆ’ ಎಂದು ಮಾಹಿತಿ ನೀಡಿದರು.

More articles

Latest article

Most read