ಅಪಾರ್ಟ್‌ಮೆಂಟ್‌ಗಳಿಗೆ ಸುವರ್ಣಾವಕಾಶ; ಸಂಚಾರಿ ಕಾವೇರಿ ಬಲ್ಕ್ ಬುಕ್ಕಿಂಗ್ ಗೆ ಜಲಮಂಡಳಿ ಅವಕಾಶ

Most read

ಬೆಂಗಳೂರು: ಅಂತರ್ಜಲದ ಅತಿಯಾದ ಅವಲಂಬನೆಯನ್ನು ಕಡಿಮೆಗೊಳಿಸಿ ನಗರದಲ್ಲಿ ಜಲ ಸಮತೋಲನ ಕಾಪಾಡುವ ನಿಟ್ಟಿನಲ್ಲಿ, ಡಿಸಿಎಂ ಡಿ ಕೆ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ನೀರಿನ ಸರಬರಾಜು ಮತ್ತು ಒಳಚರಂಡಿ ಮಂಡಳಿ “ಸಂಚಾರಿ ಕಾವೇರಿ” ಯೋಜನೆಗೆ ಚಾಲನೆ ನೀಡಿದೆ. ಇದೀಗ ಈ ಯೋಜನೆಯಡಿ ಅಪಾರ್ಟ್ ಮೆಂಟ್ ಗಳಿಗೆ ಬಲ್ಕ್ ಬುಕ್ಕಿಂಗ್ ವ್ಯವಸ್ಥೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಇಂದು ಬೆಂಗಳೂರು ಜಲಮಂಡಳಿಯ ಕೆಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಸೂಚನೆ ನೀಡಿದರು.

“ನಗರದ ಹೊರವಲಯದಲ್ಲಿರುವ ಬಹುತೇಕ ಅಪಾರ್ಟ್‌ಮೆಂಟ್‌ಗಳು ಅಂತರ್ಜಲದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಇಲ್ಲಿನ ಜನರು ತಮ್ಮ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಖರೀದಿಸುತ್ತಿದ್ದಾರೆ. ಟ್ಯಾಂಕರ್ ಗಳು ಕೂಡಾ ಕೊಳವೆಬಾವಿಗಳಿಂದ ಸಂಗ್ರಹಿಸುವಂತಹ ನೀರನ್ನು ಪೂರೈಸುತ್ತಿದ್ದಾರೆ. ಇದರಿಂದ ಅಂತರ್ಜಲದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡುವ ಹಾಗೂ ಬಿಐಎಸ್ ಪ್ರಮಾಣೀಕೃತ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ BWSSB ಈ ಹೊಸ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಅಪಾರ್ಟ್‌ಮೆಂಟ್‌ಗಳು ತಮ್ಮ ವರ್ಷಾವಧಿಯ ನೀರಿನ ಅಗತ್ಯಕ್ಕಾಗಿ ಜಲಮಂಡಳಿಯ BIS ಪ್ರಮಾಣಿತ ಕುಡಿಯುವ ನೀರನ್ನು ಟ್ಯಾಂಕರ್ಗಳ ಮೂಲಕ ಬುಕ್ಕಿಂಗ್ ಮಾಡಿಕೊಳ್ಳುವ ಅವಕಾಶ ಪ್ರಾರಂಭಿಸಲಾಗಿದೆ,” ಎಂದು ತಿಳಿಸಿದರು.
ಬುಕ್ಕಿಂಗ್ ಪ್ರಕ್ರಿಯೆ ಹೇಗಿರುತ್ತದೆ?

  • “ಮೊದಲು ಬಂದವರಿಗೆ ಮೊದಲು ಅವಕಾಶ” (First Come, First Serve) ಆಧಾರಿತ ಬುಕ್ಕಿಂಗ್
  • ಕನಿಷ್ಠ ಒಂದು ತಿಂಗಳ ಮುಂಗಡ ಪಾವತಿ ಅವಶ್ಯಕ
  • ಬಲ್ಕ್ ಬುಕ್ಕಿಂಗ್ ಮೂಲಕ ನಿರಂತರ ಸರಬರಾಜು ಖಚಿತಪಡಿಸಿಕೊಳ್ಳುವ ವ್ಯವಸ್ಥೆ
  • ಒಂದು ವರ್ಷ ಅವಧಿಗೆ ಬುಕ್ಕಿಂಗ್ ಮಾಡುವ ವ್ಯವಸ್ಥೆ ಲಭ್ಯ
    ಸಂಚಾರಿ ಕಾವೇರಿ ಯೋಜನೆಯು ಭಾರತದ ಮೊದಲ ತಾಂತ್ರಿಕ ವ್ಯವಸ್ಥೆಯ ಟ್ಯಾಂಕರ್ ಯೋಜನೆಯಾಗಿದ್ದು, GPS ನಿಯಂತ್ರಣ, ಪೂರೈಕೆ ಶ್ರೇಣೀಕರಣ ಮತ್ತು ಪೂರೈಕೆ ನಿಯಂತ್ರಣ ಕೇಂದ್ರಗಳ ಮೂಲಕ ನಗರವನ್ನು ಅವಶ್ಯಕ ನೀರಿನಿಂದ ಲಭ್ಯವಾಗುವಂತೆ ಮಾಡಲಾಗುತ್ತಿದೆ.
  • “BWSSB ಜನಪರ ಜಲಮಂಡಳಿಯಾಗಿ ಬದಲಾಗುತ್ತಿದೆ. ನಮ್ಮ ಗುರಿ ಬೆಂಗಳೂರಿನ ಮುಂದಿನ ಪೀಳಿಗೆಗೆ ಭದ್ರ ನೀರಿನ ಭವಿಷ್ಯವನ್ನು ಕಟ್ಟಿಕೊಡುವುದಾಗಿದೆ. ಈ ನಿಟ್ಟಿನಲ್ಲಿ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಅಪಾರ್ಟ್‌ಮೆಂಟ್‌ಗಳಿಗೂ ವಿಸ್ತರಿಸಲಾಗಿದೆ. ಈ ಯೋಜನೆಯ ಸದ್ಬಳಕೆಯನ್ನು ಮಾಡಿಕೊಳ್ಳುವ ಮೂಲಕ ಬಿಐಎಸ್ ಪ್ರಮಾಣಿಕೃತ ನೀರನ್ನು ಪಡೆದುಕೊಳ್ಳಬಹುದಾಗಿದೆ”. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಮಾಹಿತಿ ನೀಡಬೇಕು ಎಂದು ಡಾ. ಮನೋಹರ್ ಪ್ರಸಾತ್ ತಿಳಿಸಿದರು.

More articles

Latest article