ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಸೆರೆವಾಸದಲ್ಲಿದ್ದ ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ ಅವರು ಹತ್ತು ವರ್ಷಗಳ ಜೈಲುವಾಸದ ಬಳಿಕ ದೋಷಮುಕ್ತರಾಗಿ ನಾಗಪುರ ಸೆಂಟ್ರಲ್ ಜೈಲಿನಿಂದ ಹೊರಗಡೆ ಬಂದಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಪ್ರೊ. ಸಾಯಿಬಾಬಾ ಹಾಗೂ ಇನ್ನಿತರ ಐದು ಮಂದಿ ಆರೋಪಿಗಳನ್ನು ಮಾರ್ಚ್ 5ರಂದು ದೋಷಮುಕ್ತಗೊಳಿಸಿತ್ತು. ಈ ಆದೇಶದ ವಿರುದ್ಧ ಮಹಾರಾಷ್ಟ್ರ ಸರಕಾರವು ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.