4.7 ಟನ್ ತೂಕದ ಇಸ್ರೋ ಉಪಗ್ರಹ ಕಕ್ಷೆಗೆ; ಬ್ರಾಡ್ ಬ್ಯಾಂಡ್ ಸೇವೆ ಸುಧಾರಣೆ ನಿರೀಕ್ಷೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಂವಹನ ಉದ್ದೇಶದ ‘ಜಿಎಸ್ಟಿ-ಎನ್2’ ಉಪಗ್ರಹವನ್ನು ಸ್ಪೇಸ್ ಎಕ್ಸ್ನ ‘ಫಾಲ್ಕನ್-9’ ರಾಕೆಟ್ ನೆರವಿನಿಂದ ಅಮೆರಿಕದ ಕೇಪ್ ಕೆನವೆರಲ್ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನ ಮಾಡಿ ಕಕ್ಷೆಗೆ ಸೇರಿಸಲಾಗಿದೆ ಎಂದು ಇಸ್ರೋದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಎಐಎಲ್) ಮಾಹಿತಿ ನೀಡಿದೆ.

4.7 ಟನ್ ಭಾರದ ಈ ‘ಜಿಎಸ್ಟಿ-ಎನ್2’ ಹೈ- ಗ್ರೂಪುಟ್ (ಎಚ್ಟಿಎಸ್) ನಿಗದಿತ ಜಿಯೋ ಸಿಂಕ್ರೋನಸ್ ಟ್ರಾನ್ಸ್ಫರ್ ಕಕ್ಷೆಗೆ (ಜಿಟಿಒ) ಯಶಸ್ವಿಯಾಗಿ ಸೇರಿಸಲಾಗಿದೆ ಎಂದು ಎನ್ಎಸ್ಎಐಎಲ್ ಹೇಳಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದ್ದು, ಬಳಿಕ ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ನಿಯಂತ್ರಣಕ್ಕೆ ತೆಗೆದುಕೊಂಡಿತು ಎಂದು ಎನ್ಎಸ್ಎಐಎಲ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಜಿಎಸ್ಟಿ-ಎನ್2 ಉಪಗ್ರಹವು ದೇಶದ ಬ್ರಾಡ್ ಬ್ಯಾಂಡ್ ಸೇವೆ ಹಾಗೂ ವಿಮಾನಗಳಲ್ಲಿ ಕನೆಕ್ಟಿವಿಟಿ ಹೆಚ್ಚಿಸಲು ಸಹಾಯಕವಾಗಲಿದೆ.

More articles

Latest article

Most read