ಇಸ್ರೇಲ್ ಆರ್ಥಿಕತೆ ತೀವ್ರ ಕುಸಿತ : ಪ್ರತಿವಾರ 3.7 ಶತಕೋಟಿ ಡಾಲರ್ ನಷ್ಟ

ಹೈಟೆಕ್ ಮತ್ತು ಉತ್ಪಾದನಾ ವಲಯಗಳಲ್ಲಿ ಕಾರ್ಮಿಕರ ಕೊರತೆಯಿಂದ ಜಿಡಿಪಿ ಕುಸಿತ

ಇಸ್ರೇಲ್‌ : ಇರಾನ್ ನೊಂದಿಗೆ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಇಸ್ರೇಲ್ ದೇಶದ ಆರ್ಥಿಕತೆ ಊಹಿಸಲಾಗದ ರೀತಿಯಲ್ಲಿ ಕುಸಿತ ಕಾಣುತ್ತಿದ್ದು, ಪ್ರತಿವಾರ 3.7 ಶತಕೋಟಿ ಡಾಲರ್ ನಷ್ಟ ಅನುಭವಿಸುತ್ತಿದೆ.

ಸೇನಾ ವೆಚ್ಚ ವಾಯು ರಕ್ಷಣಾ ವ್ಯವಸ್ಥೆಗಳ ನಿರ್ವಹಣಾ ವೆಚ್ಚಗಳ ಜೊತೆಗೆ ದೇಶೀಯ ಉತ್ಪಾದನೆಯಲ್ಲಿ ಗಮನಾರ್ಹ ಕುಸಿತದ ಕಾರಣದಿಂದ ಇಸ್ರೇಲ್ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ.

ಪ್ರಮುಖವಾಗಿ ಇಸ್ರೇಲ್ ಲಕ್ಷಾಂತರ ಮೀಸಲು ಸೈನಿಕರನ್ನು  ನಿಯೋಜಿಸಿಕೊಂಡ ಕಾರಣ ಹೈಟೆಕ್ ಮತ್ತು ಉತ್ಪಾದನಾ ವಲಯಗಳಲ್ಲಿ ಗಮನಾರ್ಹ ಶೇಕಡಾವಾರು ಕಾರ್ಮಿಕರ ಕೊರತೆಯಿಂದಾಗಿ  ಜಿಡಿಪಿ ಕುಸಿತಕ್ಕೆಕಾರಣವಾಗಿದೆ, ಮತ್ತು ಯುದ್ಧ ತೀವ್ರಗೊಳ್ಳುತ್ತಿದ್ದಂತೆ  ಅಂತರರಾಷ್ಟ್ರೀಯ ಹೂಡಿಕೆದಾರರು, ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ 

ಒಂದು ಕಾಲದಲ್ಲಿ ಆರ್ಥಿಕತೆಯ ಅಭಿವೃದ್ಧಿಶೀಲ ಆಧಾರಸ್ತಂಭಗಳಾಗಿದ್ದ “ಪ್ರವಾಸೋದ್ಯಮ” ಮತ್ತು ಅಂತರರಾಷ್ಟ್ರೀಯ ವ್ಯಾಪಾರಗಳು, ಪ್ರಸ್ತುತ ನಡೆಯುತ್ತಿರುವ ಕ್ಷಿಪಣಿ ದಾಳಿಗಳು ಮತ್ತು ಪ್ರಾದೇಶಿಕ ಅಸ್ಥಿರತೆಯಿಂದಾಗಿ ಸಂಪೂರ್ಣ ಸ್ಥಗಿತಗೊಂಡಿದೆ. ವಿವಿಧ ಜಲಮಾರ್ಗಗಳ ಮುಚ್ಚುವಿಕೆ, ಮತ್ತು “ಟೆಲ್ ಅವೀವ್‌”ಗೆ ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ಸ್ಥಗಿತಗೊಳಿಸಿರುವುದರಿಂದ ರಾಷ್ಟ್ರದ ಮಾರುಕಟ್ಟೆಗಳನ್ನು ಜಾಗತಿಕ ವಾಣಿಜ್ಯದಿಂದ ಮತ್ತಷ್ಟು ಪ್ರತ್ಯೇಕಿಸಿದಂತಾಗಿದೆ.

ಪ್ರತೀಕಾರದ ದಾಳಿಗಳನ್ನು ಎದುರಿಸಲು ಅಧಿಕ ವೆಚ್ಚದಲ್ಲಿ ಬಳಸಲಾಗುತ್ತಿರುವ ಐರನ್ ಡೋಮ್ ಮತ್ತು ಆರೋ ಇಂಟರ್‌ಸೆಪ್ಟರ್‌ಗಳ ಮರುಪೂರಣಕ್ಕೆ ಹಣಕಾಸು ಒದಗಿಸಲು ಸರ್ಕಾರವು ಹರಸಾಹಸ ಪಡುತ್ತಿದೆ. ಈಗ ನಡೆಯುತ್ತಿರುವ ಸಂಘರ್ಷವು ಇದೇ ರೀತಿ ಮುಂದುವರಿದರೆ, ಇಸ್ರೇಲ್  ದೀರ್ಘಾವಧಿಯ ಹಣಕಾಸಿನ ಕೊರತೆಯನ್ನು ಪರಿಹರಿಸಲು ವರ್ಷಗಳ ಕಾಲ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ನೇರ ಮಿಲಿಟರಿ ವೆಚ್ಚದ ಹೊರತಾಗಿ, ಹಾನಿಗೊಳಗಾದ ಪ್ರದೇಶಗಳನ್ನು ದುರಸ್ತಿ ಮಾಡುವ ಮತ್ತು ಸ್ಥಳಾಂತರಗೊಂಡ ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುವ ಮತ್ತು ನೆರವು ನೀಡುವ ವೆಚ್ಚಗಳು ಪ್ರತಿದಿನ ಹೆಚ್ಚುತ್ತಿದೆ. ಅಂತರರಾಷ್ಟ್ರೀಯ  ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ, ಶೀಘ್ರದಲ್ಲಿ ಯುದ್ಧ ನಿಲ್ಲದಿದ್ದರೆ ಅಥವಾ ಕದನ ವಿರಾಮ ಘೋಷಣೆ ಆಗದಿದ್ದರೆ, ಇಸ್ರೇಲ್‌ ಕ್ರೆಡಿಟ್ ರೇಟಿಂಗ್‌ ಮತ್ತಷ್ಟು ಕೆಳಮಟ್ಟಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ

More articles

Latest article

Most read