ಇರಾನ್ ನೌಕಾದಳದ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಹತ್ಯೆ

ಜೆರುಸಲೆಮ್ : ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ನೌಕಾ ದಳದ ಕಮಾಂಡರ್ ಅಲಿರೆಜಾ ತಂಗ್ಸಿರಿ ಅವರನ್ನು ಇಸ್ರೇಲ್ ವಾಯುಪಡೆಯ ನಿಖರ ಹಾಗೂ ಮಾರಕ ದಾಳಿಯಲ್ಲಿ ಹತ್ಯೆಗೈಯಲಾಗಿದೆ ಎಂದು ಇಸ್ರೇಲ್ ಘೋಷಿಸಿದೆ.

ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಜ್ ಅವರು, “ಕಳೆದ ರಾತ್ರಿ ನಡೆದ ನಿಖರ ಮತ್ತು ಮಾರಕ ಕಾರ್ಯಾಚರಣೆಯಲ್ಲಿ ಇರಾನ್ ರೆವಲ್ಯೂಷನರಿ ಗಾರ್ಡ್ಸ್ ನೌಕಾ ದಳದ ಕಮಾಂಡರ್ ತಂಗ್ಸಿರಿ ಅವರನ್ನು ಮತ್ತು ಇತರ ಹಿರಿಯ ನೌಕಾ ಅಧಿಕಾರಿಗಳನ್ನು ಕೊಂದುಹಾಕಲಾಗಿದೆ” ಎಂದು ಹೇಳಿದ್ದಾರೆ.

ತಂಗ್ಸಿರಿ ಅವರು ಹಾರ್ಮುಜ್ ಜಲಸಂಧಿಯಲ್ಲಿ ವ್ಯಾಪಾರಿ ಹಡಗುಗಳನ್ನು ನಿರ್ಬಂಧಿಸುವ ಉಗ್ರ ಕೃತ್ಯಕ್ಕೆ ನೇರವಾಗಿ ಜವಾಬ್ದಾರರಾಗಿದ್ದರು ಎಂದು ಇಸ್ರೇಲ್ ಆರೋಪಿಸಿದ್ದು, ಈ ಹತ್ಯೆಯನ್ನು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಉದ್ದೇಶದಿಂದ ಮಾಡಲಾಗಿದೆ ಎಂದು ಪ್ರತಿಪಾದಿಸಿದೆ.

ಇಸ್ರೇಲ್-ಅಮೆರಿಕಾ ದೇಶಗಳು ಇರಾನ್ ವಿರುದ್ಧ ಫೆಬ್ರವರಿ 28, 2026ರಿಂದ ನಡೆಸುತ್ತಿರುವ ಆಕ್ರಮಣಕಾರಿ ದಾಳಿಗಳಲ್ಲಿ ಇರಾನ್‌ನ ಹಲವು ಹಿರಿಯ ಸೇನಾ ಮತ್ತು ರಾಜಕೀಯ ನಾಯಕರನ್ನು ಕೊಂದುಹಾಕಿವೆ.

ತಂಗ್ಸಿರಿ ಹತ್ಯೆ ಸಂಬಂಧ ಇರಾನ್ ಕಡೆಯಿಂದ ಇದುವರೆಗೆ ಅಧಿಕೃತ ದೃಢೀಕರಣ ಅಥವಾ ಪ್ರತಿಕ್ರಿಯೆ ಬಂದಿಲ್ಲ. ಇರಾನ್ ಮಾಧ್ಯಮಗಳು ಇನ್ನೂ ಮೌನ ವಹಿಸಿವೆ.

ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ನೌಕಾ ದಳದ ಮುಖ್ಯಸ್ಥರಾಗಿದ್ದ ಅಲಿರೆಜಾ ತಂಗ್ಸಿರಿ ಅವರು ಇರಾನ್‌ನ ನೌಕಾ ಶಕ್ತಿಯನ್ನು ನಿಯಂತ್ರಿಸುತ್ತಿದ್ದ ಪ್ರಮುಖ ವ್ಯಕ್ತಿ. ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವುದರ ಮೂಲಕ ವಿಶ್ವ ತೈಲ ಸರಬರಾಜಿನ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಇಸ್ರೇಲ್ ಹೇಳುತ್ತಿದೆ.

ಈ ಹತ್ಯೆಯು ಇರಾನ್‌ಗೆ ಮತ್ತೊಂದು ದೊಡ್ಡ ಆಘಾತ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಫೆಬ್ರವರಿ ಅಂತ್ಯದಿಂದ ಇಲ್ಲಿಯವರೆಗೆ ಇರಾನ್ ಸುಪ್ರೀಂ ಲೀಡರ್ ಅಲಿ ಖಾಮೆನಿ, ಸುರಕ್ಷತಾ ಮುಖ್ಯಸ್ಥ ಅಲಿ ಲರಿಜಾನಿ, ಬಸೀಜ್ ಮುಖ್ಯಸ್ಥ ಜನರಲ್ ಘೋಲಾಮ್‌ರೆಜಾ ಸೊಲೈಮಾನಿ, ಗುಪ್ತಚರ ಮಂತ್ರಿ ಎಸ್ಮಾಯಿಲ್ ಖತೀಬ್ ಸೇರಿದಂತೆ ಹಲವು ಹಿರಿಯ ನಾಯಕರನ್ನು ಕಳೆದುಕೊಂಡಿದೆ.

ಈ ಕ್ರೂರ ಹತ್ಯೆಗಳ ಸರಣಿಯು ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ. ಇಸ್ರೇಲ್ ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸುತ್ತಿದ್ದು, ಇರಾನ್ ಮೇಲಿನ ದಾಳಿಗಳು ದಿನೇ ದಿನೇ ಹೆಚ್ಚುತ್ತಿವೆ.

More articles

Latest article

Most read