ಇಸ್ರೇಲ್ ವೈಮಾನಿಕದಾಳಿ: ಇರಾನ್ ಉನ್ನತ ಅಧಿಕಾರಿ ಅಲಿ ಲಾರಿಜಾನಿ ಗುರಿ !

ಟೆಹ್ರಾನ್/ಜೆರೂಸಲೆಮ್: ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಯುದ್ಧವು ಅತ್ಯಂತ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಮಂಗಳವಾರ ರಾತ್ರಿ ಇಸ್ರೇಲ್ ರಕ್ಷಣಾ ಪಡೆಗಳು (IDF) ಇರಾನ್‌ನಾದ್ಯಂತ ನಡೆಸಿದ ಸರಣಿ ವೈಮಾನಿಕ ದಾಳಿಗಳಲ್ಲಿ ಇರಾನ್‌ನ ಉನ್ನತ ರಾಜತಾಂತ್ರಿಕ ಅಧಿಕಾರಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಅವರನ್ನು ಗುರಿಯಾಗಿಸಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

‘ದ ಟೈಮ್ಸ್ ಆಫ್ ಇಸ್ರೇಲ್’ ವರದಿಯ ಪ್ರಕಾರ, ಟೆಹ್ರಾನ್‌ನಲ್ಲಿ ನಡೆದ ದಾಳಿಯಲ್ಲಿ ಲಾರಿಜಾನಿ ಮೃತಪಟ್ಟಿದ್ದಾರೆಯೇ ಅಥವಾ ಗಾಯಗೊಂಡಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಇಸ್ರೇಲ್‌ ರಕ್ಷಣೆ ಪಡೆಯ (ಐಡಿಎಫ್) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎಯಾಲ್ ಜಮೀರ್ ಅವರು, “ರಾತ್ರೋರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಶತ್ರು ಪಡೆಯ ಪ್ರಮುಖ ವ್ಯಕ್ತಿಗಳನ್ನು ಮಟ್ಟಹಾಕುವಲ್ಲಿ ಮಹತ್ವದ ಸಾಧನೆಯಾಗಿದೆ” ಎಂದು ಹೇಳುವ ಮೂಲಕ ಲಾರಿಜಾನಿ ಮೇಲಿನ ದಾಳಿಯನ್ನು ಪರೋಕ್ಷವಾಗಿ ದೃಢಪಡಿಸಿದ್ದಾರೆ. ಇದೇ ವೇಳೆ ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್

ಮೂರು ಪ್ರಮುಖ ನಗರಗಳ ಮೇಲೆ ದಾಳಿ:

ಇಸ್ರೇಲ್ ಸೇನೆಯು ಎಕ್ಸ್ (X) ಮೂಲಕ ದಾಳಿಯ ಭೂಪಟವನ್ನು ಬಿಡುಗಡೆ ಮಾಡಿದ್ದು, ಇರಾನ್‌ನ ಆಯಕಟ್ಟಿನ ಪ್ರದೇಶಗಳ ಮೇಲೆ ದಾಳಿ ನಡೆಸಿರುವುದನ್ನು ಖಚಿತಪಡಿಸಿದೆ:

ಟೆಹ್ರಾನ್: ಕ್ಷಿಪಣಿ ಸಂಗ್ರಹಾಗಾರ ಮತ್ತು ಡ್ರೋನ್ ಕೇಂದ್ರಗಳ ಮೇಲೆ ಹತ್ತಾರು ಬಾಂಬ್‌ಗಳನ್ನು ಹಾಕಲಾಗಿದೆ.

ಶಿರಾಜ್: ಇರಾನ್ ಆಂತರಿಕ ಭದ್ರತಾ ಪಡೆಗಳ ಕಮಾಂಡ್ ಸೆಂಟರ್ ಧ್ವಂಸಗೊಳಿಸಲಾಗಿದೆ.

ತಬ್ರಿಜ್: ವಾಯುವ್ಯ ಇರಾನ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ.

More articles

Latest article

Most read