ಬೀದರ್: 10 ವರ್ಷದ ಅವಧಿಯಲ್ಲಿ ಬೀದರ್ ರೈತರಿಗೆ ಏನು ಕೊಟ್ಟಿದಿರಿ ಖೂಬಾ ಎಂದು ಕೇಳಿರುವ ಸಚಿವ ಈಶ್ವರ ಖಂಡ್ರೆ ಭಗವಂತ ಖೂಬಾ ಜಿಲ್ಲೆಯ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಫಸಲ್ ಭೀಮ್ ಯೋಜನೆ ಗೋಲ್ ಮಾಲ್ ಯೋಜನೆ ಎಂದು ಗುಡುಗಿದ್ದಾರೆ.
ಬಿಮಾ ಕಂಪನಿಗೆ 650 ಕೋಟಿ ರೂ. ಲಾಭ ಆಗಿದೆ. ಆರೋಪ ಬೇಡ, ದಾಖಲೆ ತೋರಿಸಿ ಎಂದು ಖೂಬಾಗೆ ಟಾಂಗ್ ಕೊಟ್ಟ ಖಂಡ್ರೆ, ರಾಸಾಯನಿಕ ಖಾತೆಯ ಮಂತ್ರಿಯಾದರು ಸಕಾಲಕ್ಕೆ ಗೊಬ್ಬರ ವಿತರಣೆಯಾಗಿಲ್ಲ. ಖೂಬಾ ಕುಟುಂಬದವರು ಬಿಮ್ಸ್ ಸ್ವಚ್ಛತಾ ಕಾರ್ಮಿಕರ ಹೆಸರಲ್ಲಿ ಹಣ ಲೂಟಿ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಖೂಬಾ ವಿರುದ್ಧ ಗಂಭೀರ ಆರೋಪ ಮಾಡಿರುವ ಖಂಡ್ರೆ ಅವರು, ಬರೀ ಸುಳ್ಳು, ಅಪಪ್ರಚಾರ ಮಾಡುವುದು ಖೂಬಾ ಕೆಲಸವಾಗಿದೆ ಎಂದಿದ್ದಾರೆ. ಡಿಸಿಸಿ ಬ್ಯಾಂಕ್ ನಲ್ಲಿ ನಡೆದ IT ದಾಳಿ ವಿಚಾರ ಪ್ರಸ್ತಾಪಿಸಿದ ಖಂಡ್ರೆ, ನಾವು ರೈತರ ಪರವಾಗಿ ಇದ್ದೇವೆ, ನೀವು ರೈತ ವಿರೋಧಿ. ನನ್ನ ಸಹೋದರ ನಾಲ್ಕು ತಿಂಗಳ ಹಿಂದೆಯಷ್ಟೆ ಅಧ್ಯಕ್ಷನಾಗಿದ್ದಾನೆ. ಹಿಂದೆ ಇದ್ದವರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಬೀದರ್ ನಲ್ಲಿ ಯುವನಾಯಕ ಸಾಗರ್ ಗೆಲುವು ಖಚಿತ. ಜಿಲ್ಲೆಯ ಜನರು ಸಾಗರ್ ಖಂಡ್ರೆಗೆ ಆಶೀರ್ವಾದ ಮಾಡುತ್ತಾರೆ. ಬಿಜೆಪಿಯವರೇ ಅಕ್ರಮ ಮಾಡುತ್ತಾರೆ, ಮತ್ತೆ ಅವರೇ ಸುಳ್ಳು ಹೇಳುತ್ತಾರೆ. ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲು ಮಾಡುತ್ತೇನೆ ಎಂದರು.
ಸುಳ್ಳು, ವೈಕ್ತಿಗತ ವ್ಯಂಗ್ಯ ಮಾಡಿರುವ ಖೂಬಾ ವಿರುದ್ಧ ಖಂಡ್ರೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಖೂಬಾ ಅವರು ರಾಮದೇವ್ ಜೊತೆಗೂಡಿ ಸೂರ್ಯಕಾಂತ್ ನಾಗಮಾರಪಳ್ಳಿ ಟಿಕೆಟ್ ಕಟ್ ಮಾಡಿದ್ದಾರೆ. ಈ ಮೂಲಕ ಸೂರ್ಯಕಾಂತ್ ನಾಗಮಾರಪಳ್ಳಿಯವರ ರಾಜಕೀಯ ಜೀವನವನ್ನು ಭಗವಂತ ಖೂಬಾ ಮುಗಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.