ಬೆಂಗಳೂರು: ಸಂಸದ, NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕಾಮಕಾಂಡದಂಥ ಪ್ರಕರಣದ ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿ. ಹೊರಗಡೆ ಇದ್ದು ತನಿಖೆ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡುವುದು ಸರಿಯಲ್ಲ. ತನಿಖೆ ನಡೆಸಲು ನಮ್ಮ ತನಿಖಾ ತಂಡ ಸಮರ್ಥವಿದೆ. SIT ಬಗ್ಗೆ ವಿರೋಧ ಮಾಡುವುದು ಸರಿಯೇ? ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಗ್ಗೆ ಲಘುವಾಗಿ ಮಾತಾಡುವುದನ್ನು ನಿಲ್ಲಿಸುವಂತೆ ಎಚ್ಚರಿಸಿದರು.
ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಿಂದ ನಮಗೆಲ್ಲಾ ನಾಚಿಕೆಯಾಗ್ತಿದೆ. ಯಾವ ಕಾರಣಕ್ಕೆ ಜೆಡಿಎಸ್ ನವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಆರೋಪಿ ಬಂಧಿಸಬೇಕು ಎಂದು ನಾವು ಪ್ರತಿಭಟನೆ ಮಾಡಬೇಕಿದೆ ಎಂದು ಅವರು ಕಿಡಿಕಾರಿದರು.
ʼಒಕ್ಕಲಿಗರು ಅಂದ್ರೆ ನೀವು ನೀವೂ ಅಂದ್ರೆ ಒಕ್ಕಲಿಗರುʼ. ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದೀರಾ? ನಾವೆಲ್ಲ ಒಕ್ಕಲಿಗರಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.