ತೆಹರಾನ್ : ಇತ್ತಿಚೆಗೆ ಅಮೆರಿಕ ಮತ್ತು ಇಸ್ರೆಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಹಲವು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ ನಂತರ, ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ತೀವ್ರಗೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಸಂಘರ್ಷವು ದೀರ್ಘಕಾಲದ ಯುದ್ಧವಾಗಿ ಬದಲಾಗುವ ಲಕ್ಷಣಗಳು ಕಾಣಿಸುತ್ತಿವೆ. ಈ ಸಂದರ್ಭದಲ್ಲಿ, ಇರಾನ್ ನಾಯಕನನ್ನೆ ಹೊಡೆದುರುಳಿಸಿದ ಅಮೆರಿಕದಂತಹ ಬಲಿಷ್ಠ ರಾಷ್ಟ್ರವನ್ನು ಎದುರಿಸಲು ಇರಾನ್ ಬಳಸುತ್ತಿರುವ ಆಯುಧಗಳು ಮತ್ತು ಮಿಲಿಟರಿ ತಂತ್ರಗಳ ಬಗ್ಗೆ ಮಾಹಿತಿ .
ಇರಾನ್‌ನ ಕ್ಷಿಪಣಿ ಬಲ: ಇರಾನ್ ಬಳಿ ಆಧುನಿಕ ವಾಯುಪಡೆ ಇಲ್ಲದಿದ್ದರೂ, ಇರಾನ್ ತನ್ನ ಕ್ಷಿಪಣಿ ಶಕ್ತಿಯನ್ನೇ ರಕ್ಷಣಾ ಕವಚವನ್ನಾಗಿ ಮಾಡಿಕೊಂಡಿದೆ. ಮಧ್ಯಪ್ರಾಚ್ಯದಲ್ಲೇ ಅತ್ಯಂತ ವೈವಿಧ್ಯಮಯ ಕ್ಷಿಪಣಿಗಳನ್ನು ಇರಾನ್ ಹೊಂದಿದೆ.
ದೂರಗಾಮಿ ಕ್ಷಿಪಣಿಗಳು(Arsenal, Range and Strategy) : ಇವುಗಳು ಇರಾನ್‌ನ ಅತ್ಯಂತ ಶಕ್ತಿಶಾಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು 2,000 ಕಿ.ಮೀ ನಿಂದ 2,500 ಕಿ.ಮೀ ದೂರದವರೆಗೆ ಸಾಗಬಲ್ಲವು ಸಾಮರ್ಥ್ಯ ವನ್ನು ಹೊಂದಿವೆ . ಇವು ಇಸ್ರೇಲ್ ಮತ್ತು ಗಲ್ಫ್‌ನ ಎಲ್ಲಾ ಅಮೆರಿಕನ್ ನೆಲೆಗಳನ್ನು ತಲುಪಬಲ್ಲವು.
ಅಲ್ಪಾವಧಿ ಕ್ಷಿಪಣಿಗಳು (Short-range): ಫತೇಹ್ ವೇರಿಯಂಟ್ಸ್, ಜೊಲ್ಫಾಘರ್ ಮತ್ತು ಖಿಯಾಮ್-1 ಕ್ಷಿಪಣಿಗಳು 150-800 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಹತ್ತಿರದ ನೆಲೆಗಳ ಮೇಲೆ ಕ್ಷಿಪ್ರ ದಾಳಿ ನಡೆಸಲು ಬಳಕೆಯಾಗುತ್ತವೆ.
ಮಧ್ಯಮ ಶ್ರೇಣಿಯ ಕ್ಷಿಪಣಿಗಳು (Medium-range): ಶಹಾಬ್-3, ಇಮಾದ್ ಮತ್ತು ಸಜ್ಜೀಲ್ ಕ್ಷಿಪಣಿಗಳು ಇಡೀ ಪ್ರದೇಶವನ್ನು ತಲುಪುವ ಸಾಮರ್ಥ್ಯ ಹೊಂದಿವೆ. ಇವುಗಳಲ್ಲಿ ‘ಸಜ್ಜೀಲ್’ ಘನ ಇಂಧನ ಚಾಲಿತವಾಗಿದ್ದು, ಅತ್ಯಂತ ವೇಗವಾಗಿ ಉಡಾವಣೆಗೆ ಸಿದ್ಧವಾಗುತ್ತದೆ.
ಡ್ರೋನ್ ಮತ್ತು ಕ್ರೂಸ್ ಕ್ಷಿಪಣಿಗಳ ತಂತ್ರ
ಇರಾನ್ ಕೇವಲ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೇಲೆ ಅವಲಂಬಿತವಾಗಿಲ್ಲ. ರೇಡಾರ್‌ಗಳಿಗೆ ಪತ್ತೆಯಾಗದಂತೆ ಹಾರುವ ಸೌಮರ್ (Soumar) ನಂತಹ ಕ್ರೂಸ್ ಕ್ಷಿಪಣಿಗಳು 2,500 ಕಿ.ಮೀ ದೂರದ ಗುರಿಯನ್ನು ತಲುಪಬಲ್ಲವು. ಇದರೊಂದಿಗೆ, ಅಗ್ಗದ ಬೆಲೆಯ ಆದರೆ ಮಾರಕವಾದ ‘ಆತ್ಮಹತ್ಯಾ ಡ್ರೋನ್’ಗಳನ್ನು (One-way attack drones) ಏಕಕಾಲದಲ್ಲಿ ನೂರಾರು ಸಂಖ್ಯೆಯಲ್ಲಿ ಉಡಾಯಿಸುವ ಮೂಲಕ ಶತ್ರುಪಡೆಯ ರಕ್ಷಣಾ ವ್ಯವಸ್ಥೆಯನ್ನು ಹದಗೆಡಿಸುವ ತಂತ್ರವನ್ನು ಇರಾನ್ ಅನುಸರಿಸುತ್ತಿದೆ.
ಭೂಗತ ‘ಕ್ಷಿಪಣಿ ನಗರಗಳು’
ಇರಾನ್ ತನ್ನ ಕ್ಷಿಪಣಿಗಳನ್ನು ಕೇವಲ ಬಯಲು ಪ್ರದೇಶದಲ್ಲಿ ಇಟ್ಟಿಲ್ಲ. ದೇಶಾದ್ಯಂತ ಪರ್ವತಗಳ ಅಡಿಯಲ್ಲಿ ಬೃಹತ್ ಸುರಂಗಗಳನ್ನು ನಿರ್ಮಿಸಿ ‘ಕ್ಷಿಪಣಿ ನಗರ’ಗಳನ್ನು (Underground Missile Cities) ಸೃಷ್ಟಿಸಿದೆ. ಶತ್ರುಗಳು ಮೊದಲ ಹಂತದ ದಾಳಿ ನಡೆಸಿದರೂ, ಇರಾನ್‌ನ ಮರುದಾಳಿ ಸಾಮರ್ಥ್ಯ ಕುಂದದಂತೆ ಈ ಭೂಗತ ನೆಲೆಗಳು ರಕ್ಷಣೆ ನೀಡುತ್ತವೆ.
ಖಮೇನಿಯವರ ಹತ್ಯೆಯನ್ನು ಇರಾನ್ ತನ್ನ ಅಸ್ತಿತ್ವಕ್ಕೆ ಬಂದ ಸವಾಲು ಎಂದು ಪರಿಗಣಿಸಿದೆ. ಹೀಗಾಗಿ ಇದು ಕೇವಲ ಒಂದು ಕ್ಷಣದ ಪ್ರತೀಕಾರವಾಗಿ ಉಳಿಯದೆ, ದೀರ್ಘಕಾಲದ ಸಂಘರ್ಷಕ್ಕೆ ನಾಂದಿಯಾಗುವ ಸಾಧ್ಯತೆ ದಟ್ಟವಾಗಿದೆ.

