ವೈಮಾನಿಕ ದಾಳಿಯಲ್ಲಿ ಇರಾನ್‌ ನೂತನ ಕಮಾಂಡರ್‌ ಶದ್ಮಾನಿ ಹತ್ಯೆ: ಇಸ್ರೇಲ್‌

ಟೆಲ್‌ ಅವೀವ್: ನಾಲ್ಕು ದಿನಗಳ ಹಿಂದೆಯಷ್ಟೇ ಇರಾನ್‌ ನ ಭದ್ರತಾ ಪಡೆಯ ನಾಯಕತ್ವ ವಹಿಸಿಕೊಂಡಿದ್ದ ಜನರಲ್‌ ಅಲಿ ಶದ್ಮಾನಿ ಅವರನ್ನು ಮಧ್ಯ ಟೆಹ್ರಾನ್‌ ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಪ್ರತಿಪಾದಿಸಿದೆ.

ಐಆರ್‌ ಜಿಸಿಯ (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌) ಖತಮ್-ಅಲ್ ಅನ್ಬಿಯಾ ಕೇಂದ್ರದ ಪ್ರಧಾನ ಕಚೇರಿಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಕಮಾಂಡರ್ ಶದ್ಮಾನಿ ಮರಣ ಹೊಂದಿದ್ದಾರೆ ಎಂದು ಅದು ತಿಳಿಸಿದೆ.

ಐಆರ್‌ ಜಿಸಿಯ ಕಮಾಂಡರ್‌ ಆಗಿದ್ದ ಮೇಜರ್ ಜನರಲ್ ಘೋಲಮ್ ಅಲಿ ರಶೀದ್ ಅವರು ಜೂನ್‌ 13ರಂದು ನಡೆದ ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದರು. ಆ ಸ್ಥಾನಕ್ಕೆ ಶದ್ಮಾನಿ ಅವರನ್ನು ನೇಮಿಸಲಾಗಿತ್ತು. ಆದರೆ, ಶದ್ಮಾನಿ ಹತ್ಯೆ ಬಗ್ಗೆ ಇರಾನ್‌ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

More articles

Latest article

Most read