ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿದ ಅಮೆರಿಕಕ್ಕೆ ತಕ್ಕ ಶಿಕ್ಷೆ: ಇರಾನ್‌ ನಾಯಕ ಖಮೇನಿ ಗುಡುಗು

ಟೆಹರಾನ್: ತನ್ನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿರುವ ಅಮೆರಿಕ ದೇಶಕ್ಕೆ ತಕ್ಕ ಎದಿರೇಟು ನೀಡುವುದಾಗಿ ಇರಾನ್‌ ಎಚ್ಚರಿಕೆ ನೀಡಿದೆ. ಅಮೆರಿಕ ದಾಳಿ ನಡೆಸಿದ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಇಸ್ಲಾಮಿಕ್ ರಿಪಬ್ಲಿಕ್ ದೇಶದ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸುವುದಾಗಿ ಶಪಥ ಮಾಡಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಖಮೇನಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇರಾನ್ ಮೇಲೆ ದಾಳಿ ನಡೆಸುವ ಮೂಲಕ ಜಿಯೋನಿಸ್ಟ್ ಶತ್ರು ದೇಶ ಬಹುದೊಡ್ಡ ತಪ್ಪು ಎಸಗಿ ದೊಡ್ಡ ಅಪರಾಧವನ್ನೇ ಮಾಡಿದೆ. ಆ ತಪ್ಪಿಗೆ ತಕ್ಕ ಶಿಕ್ಷೆಯಾಗಲಿದೆ. ಶಿಕ್ಷೆ ಈಗಿನಿಂದಲೇ ಜಾರಿಯಾಗಲಿದೆ ಎಂದು ಅವರು ಗುಡುಗಿದ್ದಾರೆ.

ಇರಾನ್‌ ನ ಫೋರ್ಡೊ, ನಟಾನ್ಜ್ ಹಾಗೂ ಎಸ್‌ ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ಬಾಂಬ್ ದಾಳಿ ನಡೆಸಿತ್ತು. ಆ ಮೂಲಕ ಇಸ್ರೇಲ್-ಇರಾನ್ ನಡುವಣ ಸಂಘರ್ಷದಲ್ಲಿ ನೇರವಾಗಿ ಮಧ್ಯಪ್ರವೇಶ ಮಾಡಿತ್ತು. ಅಮೆರಿಕ ವಿರುದ್ಧ ಪ್ರತೀಕಾರ ತೀರಿಸುವುದಾಗಿ ಇರಾನ್‌ ನ ಹಲವು ನಾಯಕರು ಈಗಾಗಲೇ ಪ್ರತಿಪಾದಿಸಿದ್ದಾರೆ.

More articles

Latest article

Most read