ಐಪಿಎಲ್‌ ಸಂಭ್ರಮಾಚರಣೆ; ಕಾಲ್ತುಳಿತಕ್ಕೆ ಬಿಜೆಪಿ ಟ್ವೀಟ್‌ ಕೂಡಾ ಕಾರಣ: ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಬಿಜೆಪಿ ಮಾಡಿದ ಟ್ವೀಟ್ ಕೂಡಾ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದ್ದಾರೆ.

ಕಾಲ್ತುಳಿತ ಪ್ರಕರಣ ಕುರಿತು ನಡೆದ ಚರ್ಚೆಗೆ ಅವರು ಉತ್ತರಿಸಿ ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

 ಬಿಜೆಪಿ ಹಲವಾರು ವರ್ಷಗಳ ಅಭಿಮಾನಿಗಳ ಕನಸನ್ನು @RCBTweets ಈ ವರ್ಷ ನನಸು ಮಾಡಿದೆ!! ಆದರೆ, ತೆರೆದ ಬಸ್‌ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ @DrParameshwara ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಟ್ವೀಟ್‌ ಮಾಡಿತ್ತು.  ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ಅಭಿಮಾನಿಗಳ ಈ ಸಂಭ್ರಮಕ್ಕೆ ಕಲ್ಲು ಹಾಕಿದ ಪರಮೆಶ್ವರ್. ಎಂದು ಬಿಜೆಪಿ ಅಧಿಕೃತ ಹ್ಯಾಂಡಲ್‌ನಿ 0ದ ಟ್ವೀಟ್ ಮಾಡಲಾಗಿದೆ. ಈ ಮೂಲಕ ಜನರ ಉನ್ಮಾದದ ಕಿಚ್ಚಿಗೆ ನೀವುಗಳು ತುಪ್ಪ ಸುರಿದಿದ್ದೀರೋ ಇಲ್ಲವೋ? ಹೇಳಿ ಎಂದು ಬಿಜೆಪಿ ಶಾಸಕರನ್ನು ಪ್ರಶ್ನಿಸಿದರು.

ಕೋವಿಡ್‌ ಸಮಯದಲ್ಲಿ ಜನರು ಆಕ್ಸಿಜನ್ ಇಲ್ಲದೆ, ಔಷಧಿಗಳಿಲ್ಲದೆ, ವೆಂಟಿಲೇಟರ್‌ಗಳಿಲ್ಲದೆ ಸಾಯುವಂತಹ ಸ್ಥಿತಿಯಲ್ಲಿದ್ದಾಗ ಗುಜರಾತ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಗೆದ್ದಿತ್ತು. ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಸದರಿ ಪಂದ್ಯಕ್ಕೆ ಅಮಿತ್ ಶಾ ಹೋಗಬೇಕೋ, ಮೋದಿ ಹೋಗಬೇಕೋ ಎಂಬ ಚರ್ಚೆ ನಡೆದು ಕೊನೆಗೆ ಅಮಿತ್ ಶಾ ಪತ್ನಿ ಸೋನಲ್ ಶಾ ಅವರು, ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಇತರೆ ನಾಯಕರುಗಳು, ಸಚಿವರುಗಳ ಜೊತೆ ಮ್ಯಾಚ್ ನೋಡಿದರು. ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಆಜಾದಿ ಕಾ ಅಮೃತ್ ಮಹೋತ್ಸವ್ ಮತ್ತು ಭಾರತದ ಹೆಮ್ಮೆಯ ಲಾಂಛನಗಳುಳ್ಳ ವೇದಿಕೆಯಲ್ಲಿ ಟ್ರೋಫಿ ನೀಡಿದರು. ಅಹಮದಾಬಾದ್‌ನ ಬೀದಿಗಳಲ್ಲಿ ಮೆರವಣಿಗೆ ಮಾಡಲು ಅವಕಾಶ ಕೊಟ್ಟರು. ಇದರಿಂದ ಕೊರೋನಾ ಸೋಂಕು ಇನ್ನಷ್ಟು ಹೆಚ್ಚಲು ಕಾರಣವಾಯಿತು ಎಂದು ನೆನಪಿಸಿದರು.

2020ರ ಫೆಬ್ರವರಿಯಲ್ಲಿ ದೇಶದಲ್ಲಿ ಕೊರೋನಾ ಹರಡುತ್ತಿದ್ದಾಗ ಮೋದಿ ಅವರು  ಟ್ರಂಪ್ ಕರೆದುಕೊಂಡು ‘ಹೌಡಿ ಮೋದಿ’ ಕಾರ್ಯಕ್ರಮ ಮಾಡಿ, ಕೊರೋನಾ ಹರಡಿ ಲಕ್ಷಾಂತರ ಜನರ ಸಾವಿಗೆ ಕಾರಣರಾಗಲಿಲ್ಲವೇ ಎಂದು ಕೇಳಿದರು.

2006 ರಲ್ಲಿ ರಾಜ್‌ಕುಮಾರ್ ರವರು ಮೃತರಾದಾಗ ಗೋಲಿಬಾರ್‌ ನಲ್ಲಿ, ಕಾಲ್ತುಳಿತದಲ್ಲಿ ಜನರು ಮರಣ ಹೊಂದಿದಾಗ ಬಿಜೆಪಿ  ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಿತ್ತು. ಆಗ ಏಕೆ ಮಾತನಾಡಲಿಲ್ಲ ? ಹಾವೇರಿಯಲ್ಲಿ ಗೊಬ್ಬರ ನೀಡದೆ ರೈತರ ಮೇಲೆ ಗುಂಡು ಹಾರಿಸಿ ಕೊಂದಾಗ ನಿಮ್ಮ ಸರ್ಕಾರವನ್ನು ಹಾಗೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಏನೆಂದು ಕರೆಯಬೇಕಿತ್ತು ಎಂದು ಬಿಜೆಪಿಯ ಸುರೇಶ್‌ ಕುಮಾರ್‌ ಅವರನ್ನು ಪ್ರಶ್ನಿಸಿದರು.

​2022 ರ ಮೇ, 2 ರಂದು ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 32 ಜನ ಮರಣ ಹೊಂದಿದಾಗ ನೀವು ಬಸವರಾಜ ಬೊಮ್ಮಾಯಿಯವರನ್ನು ಹಾಗೂ ಅಂದಿನ ಆರೋಗ್ಯ ಸಚಿವರು ಹೊಣೆ ಅಲ್ಲವೇ?  2002 ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡಗಳ ಜವಾಬ್ದಾರಿಯನ್ನು ಯಾರ ತಲೆಗೆ ಕಟ್ಟುತ್ತೀರಿ?

ದುರಂತ ಸಂಭವಿಸಿದ ಕೂಡಲೇ 04.06.2025 ರಂದೇ ಸರ್ಕಾರದ ಆದೇಶ ಸಂಖ್ಯೆ: ಹೆಚ್.ಡಿ./218/ಪಿಸಿಇ/2025, ದಿನಾಂಕ: 04.06.2025 ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಅಧ್ತಕ್ಷತೆಯಲ್ಲಿ ತನಿಖೆ ಮಾಡಲು ಆದೇಶ ಹೊರಡಿಸಲಾಯಿತು ಮತ್ತು ಆದೇಶ ಸಂಖ್ಯೆ ಹೆಚ್‌ಡಿ/220/ಪಿಸಿಇ/2025, ದಿನಾಂಕ: 05.06.2025 ರಂದು ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರ ಏಕಸದಸ್ಯರ ತನಿಖಾ ಆಯೋಗವನ್ನು ನೇಮಿಸಿ ಆದೇಶಿಸಲಾಯಿತು. ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರು ದಿನಾಂಕ: 10.07.2025 ರಂದು ತಮ್ಮ ವರದಿಯನ್ನು ಹಾಗೂ ಬೆಂಗಳೂರು ಜಿಲ್ಲಾಧಿಕಾರಿಗಳು ದಿನಾಂಕ: 11.07.2025 ರಂದು ತಮ್ಮ ಮೆಜೆಸ್ಟೀರಿಯಲ್ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಈ ಎರಡೂ ವರದಿಗಳಲ್ಲೂ ಆರ್.ಸಿ.ಬಿ.,   ಡಿ.ಎನ್.ಎ., ಕೆ.ಎಸ್.ಸಿ.ಎ. ಮತ್ತು  ನಗರ ಪೊಲಿಸರು ಮಾಡಿದ ಎಡವಟ್ಟುಗಳಿಂದ ಈ ದುರಂತ ಸಂಭವಿಸಿತು ಎಂಬುದು ಸ್ಪಷ್ಟವಾಗಿದೆ. ನಾವು ಘಟನೆ ನಡೆದ ಕೂಡಲೇ ಸಂಬ0ಧಪಟ್ಟ ಪೊಲಿಸ್ ಕಮೀಷನರ್ ನಿಂದ ಹಿಡಿದು ಪೊಲೀಸ್ ಇನ್ಸ್ಪೆಕ್ಟರ್ ವರೆಗೆ ಅಮಾನತ್ತು ಮಾಡಿ ಆದೇಶ ಹೊರಡಿಸಿದೆವು ಹಾಗೂ ಆರ್.ಸಿ.ಬಿ., ಡಿ.ಎನ್.ಎ. ಹಾಗೂ ಕೆ.ಎಸ್.ಸಿ.ಎ. ಗಳ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆವು.

ತನಿಖಾ ವರದಿಗಳ ಪ್ರಕಾರ ಆರ್.ಸಿ.ಬಿ. ಯು 04.06.2025 ರಂದು ಬೆಳಿಗ್ಗೆ 07 ಗಂಟೆ 01 ನಿಮಿಷಕ್ಕೆ ವಿಜಯೋತ್ಸವ ಆಚರಣೆ ಮಾಡುವ ಬಗ್ಗೆ ಟ್ವೀಟ್ ಅನ್ನು 16 ಲಕ್ಷ ಜನ ವೀಕ್ಷಿಸಿದ್ದರು. 8 ಗಂಟೆಗೆ ಮಾಡಿದ್ದ ಟ್ವೀಟ್ ಅನ್ನು 4 ಲಕ್ಷದ 35 ಸಾವಿರ ಜನ ನೋಡಿದ್ದರು. ಮೂರನೇ ಟ್ವೀಟ್ 03 ಗಂಟೆ 10 ನಿಮಿಷಕ್ಕೆ ಮಾಡಲಾಯಿತು, ಅದನ್ನು 7.10 ಲಕ್ಷ ಜನರು ನೋಡಿದ್ದರು. ಆರ್.ಸಿ.ಬಿ., ಡಿ.ಎನ್.ಎ.   ಮತ್ತು  ಕೆ.ಎಸ್.ಸಿ.ಎ. ಅವರಿಗೆ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಅನುಮತಿ ಕೊಟ್ಟಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

More articles

Latest article