ಅಂತಾರಾಜ್ಯ ಕಳ್ಳನ ಬಂಧನ; 40 ಲಕ್ಷ ರೂ ಮೌಲ್ಯದ ಆಭರಣ ವಶ

Most read

ಬೆಂಗಳೂರು: ಬೆಂಗಳೂರು ಹಾಗೂ ವಿವಿಧ ರಾಜ್ಯಗಳಲ್ಲಿ ಮನೆ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಹೆಣ್ಣೂರು ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು ಕೆಲಸಕ್ಕೆ ಹೋಗಿ ಹಿಂತಿರುಗುವಷ್ಟರಲ್ಲಿ ಮನೆಯ ಬೀಗ ಒಡೆದು ಮನೆಯಲ್ಲಿದ್ದ 20 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ, ಹಾಗೂ 30 ಸಾವಿರ ನಗದನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ತನಿಖೆ ಕೈಗೊಂಡ ಪೊಲೀಸರು ಹೆಚ್‌ಎಸ್‌ಆರ್ ಲೇಔಟ್‌ನ 4ನೇ ಬ್ಲಾಕ್ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಾಗ ಕಳವು ಮಾಡಿದ್ದನ್ನು ಒಪ್ಪಿಕೊಳ್ಳುತ್ತಾನೆ. ಈತನ ಬ್ಯಾಗ್ ನಲ್ಲಿ ಒಂದು ಸ್ಕೂ ಡ್ರೈವ್, ಚಿಕ್ಕದಾದ ಕಬ್ಬಿಣದ ರಾಡ್, ಹಾಗೂ ಕಟ್ಟಿಂಗ್ ಪ್ಲೇಯರ್ ಪತ್ತೆಯಾಗಿವೆ. ಬೆಂಗಳೂರು ನಗರ ಹಾಗೂ ವಿವಿಧ ರಾಜ್ಯಗಳಲ್ಲೂ ಸಹ ಮನೆ ಕಳವು ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾನೆ.

ಕಳವು ಮಾಡಿದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕುಣಿಗಲ್‌ನಲ್ಲಿರುವ ಆತನ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿರುತ್ತಾನೆ. ಕುಣಿಗಲ್ ನಲ್ಲಿರುವ ಸ್ನೇಹಿತನನ್ನು ವಿಚಾರಣೆ ಮಾಡಿದಾಗ ಆತ ಚಿನ್ನಾಭರಣಗಳನ್ನು ಚಿಕ್ಕಪೇಟೆಯ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುತ್ತಾನೆ. ಜ್ಯೂವೆಲರಿ ಶಾಪ್ನ ಮಾಲೀಕನಿಂದ 556 ಗ್ರಾಂ ಚಿನ್ನಾಭರಣ ಹಾಗೂ ಕೆ.ಜಿ 200 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಈ ಕಳ್ಳನಿಂದ ಸುಮಾರು 40 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಆರೋಪಿಯ ಬಂಧನದಿಂದ ಹೆಣ್ಣೂರು ಪೊಲೀಸ್ ಠಾಣೆಯ ಒಟ್ಟು 11 ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ.

More articles

Latest article