Saturday, July 27, 2024

ವಿವೇಕಾನಂದರ ಮಾತುಗಳು ಹೀಗಿದ್ದವು…

Most read

  • ನೀಚರೂ ಕುತಂತ್ರಿಗಳೂ ಆದ ಪುರೋಹಿತರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲೀ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ 400 ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ನೋಡಿಲ್ಲ. ಮೂಢಾಚಾರಗಳನ್ನು ಅನುಸರಿಸಿ ಹೀನಸ್ಥಿತಿಗೆ ಬರುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣ ವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ಧ ಜನರನ್ನು ಆ ದೇವರೇ ಕಾಪಾಡಬೇಕು.
  • ಭರತಖಂಡದಲ್ಲಿ ಧರ್ಮವೇನಾದರೂ ಉಳಿದುಕೊಂಡಿರುವುದೆಂದು ತಿಳಿದುಕೊಂಡಿರುವೆಯೇನು? ಜ್ಞಾನ, ಭಕ್ತಿ, ಯೋಗಗಳ ಮಾರ್ಗವೆಲ್ಲ ಹೋಯಿತು. ಈ ಉಳಿದಿರುವುದು ಒಂದೇ ಧರ್ಮ. ಅದೇ ಮುಟ್ಟಬೇಡ, ಮುಟ್ಟಬೇಡ ಎಂಬುದು, ಪ್ರಪಂಚವೆಲ್ಲ ಮೈಲಿಗೆ, ನಾನೊಬ್ಬನೇ ಮಡಿ! ಆಹಾ! ಎಷ್ಟು ತಿಳಿಯಾದ ಬ್ರಹ್ಮಜ್ಞಾನ?
  • ಭಯಂಕರವಾದ ಕೆಸರಗುಂಡಿ ಮುಂದೆ ಇದೆ ಜೋಪಾನ! ಅನೇಕರು ಅದರಲ್ಲಿ ಬಿದ್ದು ಸಾಯವರು. ಆ ಕೆಸರೇ ಇದು. ಆದೇನೆಂದರೆ ವರ್ತಮಾನ ಕಾಲದ ಹಿಂದೂಗಳ ಧರ್ಮ ವೇದದಲ್ಲಿಲ್ಲ. ಪುರಾಣದಲ್ಲಿಲ್ಲ. ಭಕ್ತಿಯಲ್ಲಿಲ್ಲ ಅಥವಾ ಮುಕ್ತಿಯಲ್ಲಿಲ್ಲ. ಆ ಧರ್ಮವೆಲ್ಲ ಅಡುಗೆ ಮಾಡುವ ಪಾತ್ರೆಯೊಳಗೆ ಪ್ರವೇಶಿಸಿದೆ. ಇಂದಿನ ಹಿಂದೂ ಧರ್ಮ ಜ್ಞಾನಮಾರ್ಗವೂ ಅಲ್ಲ, ಭಕ್ತಿ ಮಾರ್ಗವೂ ಅಲ್ಲ. ಅದರ ಧರ್ಮವೇ ಅಸ್ಪೃಶ್ಯತೆ, ಹಸಿದವನಿಗೆ ಒಂದು ತುತ್ತು ಅನ್ನವನ್ನು ಕೊಡದವನು ಮೋಕ್ಷವನ್ನು ಹೇಗೆ ಕೊಟ್ಟಾರು? ಮತ್ತೊಬ್ಬರ ಉಸಿರ ಸೋಂಕಿನಿಂದಲೇ ಇವರು ಪಾಪಿಗಳಾದರೆ ಇನ್ನೊಬ್ಬರನ್ನು ಹೇಗೆ ಶುದ್ದಿ ಮಾಡುವರು? ಅಸ್ಪೃಶ್ಯತೆ ಎಂಬುದು ಒಂದು ತರಹದ ಮನೋರೋಗ
  • ಗೌತಮ ಬುದ್ಧ ಬಂದು ದರಿದ್ರರಿಗೆ, ದುಃಖಗಳಿಗೆ ಪಾಪಿಗಳಿಗೆ ಹೇಗೆ ಮನಕರಗಬೇಕೆಂಬುದನ್ನು ತೋರಿದನು. ಆದರೆ ಅದನ್ನು ನೀವು ಲಕ್ಷಿಸಲಿಲ್ಲ. ರಾಕ್ಷಸರನ್ನು ತಪ್ಪು ಮಾರ್ಗಕ್ಕೆ ಎಳೆಯಬೇಕೆಂದು ದೇವರೇ ಈ ರೂಪ ತಾಳಿಬಂದನೆಂದು ಸುಳ್ಳು ಕಥೆಗಳನ್ನು ನಿದ್ದು ಪುರೋಹಿತರು ಜಾರಿಗೆ ತಂದರು.
  • ಬನ್ನಿ, ಮನುಷ್ಯರಾಗಿ! ಪ್ರಗತಿಗೆ ಯಾವಾಗಲೂ ವಿರುದ್ಧವಾಗಿರುವ ಪುರೋಹಿತರನ್ನು ಒದ್ದೋಡಿಸಿ. ಅವರೆಂದಿಗೂ ತಿದ್ದಿಕೊಳ್ಳುವುದಿಲ್ಲ. ಅವರ ಹೃದಯ ಎಂದಿಗೂ ವಿಶಾಲ ಆಗುವುದಿಲ್ಲ. ಶತಶತಮಾನಗಳಿಂದ ಬಂದ ಮೂಢನಂಬಿಕೆ ಮತ್ತು ದಬ್ಬಾಳಿಕೆಯ ಸಂತಾನ ಅವರು! ಮೊದಲು ಪುರೋಹಿತಶಾಹಿಯನ್ನು ಬೇರುಸಮೇತ ಕಿತ್ತೊಗೆಯಿರಿ.
  • ಪ್ರಪಂಚದ ಯಾವ ಧರ್ಮವೂ ಹಿಂದೂಧರ್ಮದಷ್ಟು ಭವ್ಯವಾಣಿಯಲ್ಲಿ ಮನುಷ್ಯತ್ವದ ಘನತೆಯನ್ನು ಬೋಧಿಸುವುದಿಲ್ಲ. ಆದರೆ ಪ್ರಪಂಚದ ಯಾವ ಧರ್ಮವೂ ದೀನದಲಿತರ ಕುತ್ತಿಗೆಯನ್ನು ಹಿಂದೂಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ. ತಪ್ಪು ಹಿಂದೂ ಧರ್ಮದ್ದಲ್ಲ. ಅಲ್ಲಿರುವ ಸಂಪ್ರದಾಯ ಶರಣದು, ಪುರೋಹಿತರದು; ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂದು ನಾನಾ ಬಗೆಯ ಕ್ರೂರ ಸಾಧನಗಳನ್ನು ಸೃಷ್ಟಿಸುವ ಶಕ್ಕರದು.
  • ಭರತಖಂಡದ ಮಹಮದೀಯರಲ್ಲಿ ಅನೇಕರು ಹೇಗೆ ಮಹಮದೀಯರಾಗಿರುವರು? ಬಲಪ್ರಯೋಗದಿಂದ ಅವರನ್ನು ಮುಸಲ್ಮಾನ ಮತಕ್ಕೆ ಸೇರಿಸಿದರು ಎನ್ನುವುದು ಶುದ್ಧ ತಪ್ಪು, ಜಮೀನ್ದಾರರ ಉಪಟಳದಿಂದ, ಪುರೋಹಿತರ ಹಿಂಸೆಯಿಂದ ತಪ್ಪಿಸಿಕೊಳ್ಳಬೇಕೆಂದು ಮುಸಲ್ಮಾನರಾದರು.
  • ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಗಳು ತೀಕ್ಷ್ಯ ದೃಷ್ಟಿಯಿಂದ ನೋಡಿದರೇನಂತೆ? ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡುಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲ ನೆಚ್ಚುವುದು ದೌರ್ಬಲ್ಯದ ಚಿಹ್ನೆ.
  • ವೇದ, ಬೈಬಲ್, ಖುರಾನ್, ಪುರಾಣಗಳು ಹಾಗು ಎಲ್ಲ ಪವಿತ್ರ ಗ್ರಂಥರಾಶಿಗಳೂ ಕೊಂಚಕಾಲದವರೆಗೆ ವಿಶ್ರಾಂತಿ ಪಡೆಯಲಿ. ದೇಶವೆಲ್ಲ ದಯೆ ಮತ್ತು ಪ್ರೇಮದ ಪ್ರತ್ಯಕ್ಷ ದೇವರನ್ನು ಆರಾಧಿಸಲಿ.
  • ಕೆಲವು ಶಾಸ್ತ್ರಗಳಿವೆ. ಅವು ಹೀಗೆ ಹೇಳುವವು: ತೂದ್ರ ವೇದವನ್ನು ಕೇಳಿದರೆ ಅವನ ಕಿವಿಗೆ ಕಾದ ಸೀಸವನ್ನು ಹಾಕಿರಿ. ಅವನು ಒಂದು ಶ್ಲೋಕವನ್ನು ಉಚ್ಚರಿಸಿದರೆ ಅವನ ನಾಲಿಗೆಯನ್ನು ಕತ್ತರಿಸಿ. ಬ್ರಾಹ್ಮಣನನ್ನು ಎಲೈ ಎಲೈ ಬ್ರಾಹ್ಮಣನೇ ಎಂದರೆ ಅವನ ನಾಲಿಗೆಯನ್ನು ಕತ್ತರಿಸಿ ಎಂದು. ಇದೊಂದು ನಿಸ್ಸಂದೇಹವಾಗಿ ಅನಾಗರಿಕ ರಾಕ್ಷಸೀ ಕೃತ್ಯ.
  • ಚಂಡಾಳನಿಗೆ ವಿದ್ಯಾಭ್ಯಾಸದ ಅವಶ್ಯಕತೆ ಇರುವಷ್ಟು ಬ್ರಾಹ್ಮಣನಿಗೆ ಇಲ್ಲ. ಬ್ರಾಹ್ಮಣನ ಮಗನಿಗೆ ಒಬ್ಬ ಉಪಾಧ್ಯಾಯನು ಬೇಕಾದರೆ ಚಂಡಾಳನ ಮಗನಿಗೆ ಹತ್ತು ಉಪಾಧ್ಯಾಯರು ಬೇಕು. ಜನನಾರಭ್ಯ ಪ್ರಕೃತಿಯು ಯಾರಿಗೆ ಸೂಕ್ಷ್ಮ ಬುದ್ದಿಯನ್ನು ಕೊಟ್ಟಿಲ್ಲವೋ ಅಂತಹವರಿಗೆ ಹೆಚ್ಚು ಸಹಾಯವನ್ನು ಒದಗಿಸಿಕೊಡಬೇಕು.

ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಪ್ರಕಟಿಸಿರುವ ‘ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ’ಯ ಹತ್ತು ಸಂಪುಟಗಳಿಂದ ಆಯ್ದ ಮಾತುಗಳು.

More articles

Latest article