ನವದೆಹಲಿ: 2025ರ ‘ಮಿಸೆಸ್ ಯುನಿವರ್ಸ್’ ಆಗಿ ಭಾರತದ ಶೆರ್ರಿ ಸಿಂಗ್ ಹೊರಹೊಮ್ಮಿದ್ದಾರೆ. 48ನೇ ಆವೃತ್ತಿಯ ಸ್ಪರ್ಧೆಯಲ್ಲಿ ಶೆರ್ರಿ ಸಿಂಗ್ ಮಿಸೆಸ್ ‘ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಫಿಲಿಪೈನ್ಸ್ ನ ಮನಿಲಾದ ಒಕಾಡಾ ಎಂಬಲ್ಲಿ ನಡೆದ ಮಿಸೆಸ್ ಯುನಿವರ್ಸ್ ಶೋದಲ್ಲಿ ಜಗತ್ತಿನ 120 ಸ್ಪರ್ಧಿಗಳು ಭಾಗವಹಿಸಿದ್ದರು. ಇವೆರಲ್ಲರನ್ನೂ ಮೀರಿ ಶೆರ್ರಿ ಸಿಂಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ವೇದಿಕೆ ಮೇಲೆ ಇಂಡಿಯಾದ ಶೆರ್ರಿ ಸಿಂಗ್ ಮಿಸೆಸ್ ಯುನಿವರ್ಸ್ ಎಂದು ಘೋಷಿಸುತ್ತಿದ್ದಂತೆ ಅವರ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು.