ವಿಶ್ವಾದ್ಯಂತ 2021ರಲ್ಲಿ ವಾಯುಮಾಲಿನ್ಯದಿಂದ 8.1 ಮಿಲಿಯನ್ ಜನ ಮೃತಪಟ್ಟಿದ್ದಾರೆ. 2021ರಲ್ಲಿ ಭಾರತದಲ್ಲಿ 2.1 ಮಿಲಿಯನ್ ಅಂದರೆ 21 ಲಕ್ಷ ಜನ ಸಾವಿಗೀಡಾಗಿದ್ದಾರೆ ಎಂದು ಬುಧವಾರ ಯುನಿಸೆಫ್ ಸಹಭಾಗಿತ್ವದಲ್ಲಿ ಯುಎಸ್ ಮೂಲದ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ ಹೆಲ್ತ್ ಎಫೆಕ್ಟ್ಸ್ ಇನ್ ಸ್ಟಿಟ್ಯೂಟ್ (ಎಚ್ಇಐ) ವರದಿ ತಿಳಿಸಿದೆ.
ಎಚ್ಇಐ ವರದಿಯಲ್ಲಿ, 2021 ರಲ್ಲಿ ವಾಯುಮಾಲಿನ್ಯದಿಂದದಾಗಿ ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 1,69,400 ಮಕ್ಕಳ ಸಾವಿಗೀಡಾಗಿದ್ದಾರೆ. 1,14,100 ಮಕ್ಕಳ ಸಾವಿನೊಂದಿಗೆ ನೈಜೀರಿಯಾ ನಂತರದ ಸ್ಥಾನದಲ್ಲಿದೆ. ಹಾಗೆಯೇ ಪಾಕಿಸ್ತಾನದಲ್ಲಿ 68,100, ಇಥಿಯೋಪಿಯಾದಲ್ಲಿ 31,100 ಮತ್ತು ಬಾಂಗ್ಲಾದೇಶದಲ್ಲಿ 19,100 ಮಕ್ಕಳು ವಾಯುಮಾಲಿನ್ಯಕ್ಕೆ ಬಲಿಯಾಗಿವೆ ಎಂಬ ಆತಂಕಕಾರಿ ವರದಿಯನ್ನಿ ಬಿಡುಗಡೆ ಮಾಡಿದೆ. ಈ ಮೂಲಕ ವಾಯುಮಾಲಿನ್ಯದಿಂದ ಗರೀಷ್ಠ ಸಾವಿಗೀಡಾಗಿರುವ ಮಕ್ಕಳು ಭಾರತದವರೇ ಆಗಿದ್ದಾರೆ.
ವಾಯುಮಾಲಿನ್ಯದಿಂದ 2021ರಲ್ಲಿ ಭಾರತ ಮತ್ತು ಚೀನಾಗಳಲ್ಲಿ ಕ್ರಮವಾಗಿ 2.1 ಮಿಲಿಯನ್ (21 ಲಕ್ಷ) ಮತ್ತು 2.3 ಮಿಲಿಯನ್ (23 ಲಕ್ಷ) ಜನ ಸಾವಿಗೀಡಾಗಿದ್ದಾರೆ. ಪಾಕಿಸ್ತಾನ (2,56,000 ಸಾವುಗಳು), ಬಾಂಗ್ಲಾದೇಶ (2,36,300) ಮತ್ತು ಮ್ಯಾನ್ಮಾರ್ 1,01,600 ಸಾವುಗಳಾಗಿವೆ. ಕಳೆದ ಯಾವುದೇ ವರ್ಷದಲ್ಲಿ ವಾಯುಮಾಲಿನ್ಯದಿಂದಾಗಿ ಇಷ್ಟು ಸಾವಿಗಳು ಆಗಿಲ್ಲ ಇದೇ ಮೊದಲ ಬಾರಿಗೆ 2021ರಂದು ಇಷ್ಟು ದೊಡ್ಡ ಮಟ್ಟದ ಸಾವಿಗಳು ಸಂಭವಿಸಿವೆ ಎಂದು ವರದಿ ಹೇಳಿದೆ.
ಪಿಎಂ 2.5 ಮತ್ತು ಓಝೋನ್ ನಿಂದ ಉಂಟಾಗುವ ವಾಯುಮಾಲಿನ್ಯದಿಂದ ವಿಶ್ವಾದ್ಯಂತ 2021 ರಲ್ಲಿ 8.1 ಮಿಲಿಯನ್ ಸಾವು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ.