ಭಾರತ ಪಾಕ್‌ ಉದ್ವಿಗ್ನ ಪರಿಸ್ಥಿತಿ: ಐಪಿಎಲ್‌ -2025 ಪಂದ್ಯಾವಳಿ ರದ್ದು

ಐಪಿಎಲ್‌ -2025 ಪಂದ್ಯ ರದ್ದಾಗಲಿದೆ ಎಂಬ ವದಂತಿಗಳು ದಟ್ಟವಾಗಿ ಹರಿದಾಡುತ್ತಿವೆ. ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಕೆಲವೇ ಕ್ಷಣಗಳಲ್ಲಿ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಲಿದೆ. ಗುರುವಾರ ಪಂಜಾಬ್‌ ಕಿಂಗ್ಸ್‌ ಮತ್ತು ದೆಲ್ಲಿ ಕ್ಯಾಪಿಟಲ್ಸ್‌ ನಡುವೆ ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸಿತ್ತು. ಧರ್ಮಶಾಲಾ ಮತ್ತು ಸಮೀಪದ ವಿಮಾನ ನಿಲ್ದಾಣಗಳನ್ನು ಮುಚಿದ್ದರಿಂದ ಎರಡೂ ತಂಡಗಳ ಆಟಗಾರರು ಮತ್ತು ಅಧಿಕಾರಿ ವರ್ಗ ವಿಶೇಷ ರೈಲಿನಲ್ಲಿ ದೆಹಲಿ ತಲುಪಿತ್ತು.

ರದ್ದುಗೊಂಡ ಧರ್ಮಶಾಲಾ ಪಂದ್ಯವೂ ಸೇರಿ ಪ್ರಸ್ತುತ ಐಪಿಎಲ್‌- 2025 ರಲ್ಲಿ 58 ಪಂದ್ಯಗಳಿವೆ. ಇನ್ನೂ 12 ಪಂದ್ಯಗಳನ್ನು ಆಡಬೇಕಿದೆ. ಲಖನೌದಲ್ಲಿ ಎರಡು, ಹೈದರಾಬಾದ್‌, ಅಹಮದಾಬಾದ್‌ ನಲ್ಲಿ ಮೂರು, ದೆಹಲಿ, ಚೆನ್ನೈ ಬೆಂಗಳೂರಿನಲ್ಲಿ ಎರಡು ಮುಂಬೈ, ಜೈಪುರದಲ್ಲಿ ನಡೆಯಬೇಕಿವೆ. ಪಂದ್ಯಾವಳಿಯನ್ನು ರದ್ದುಗೊಳಿಸಿರುವ ಬಗ್ಗೆ ಕೆಲವೇ ಹೊತ್ತಿನಲ್ಲಿ ಐಪಿಎಲ್‌ ಅಧಿಕೃತ ಪ್ರಕಟಣೆ ಮೂಲಕ ಘೋಷಿಸಲಿದೆ.

More articles

Latest article

Most read