ಭಾರತ- ಪಾಕಿಸ್ತಾನ ಸಂಘರ್ಷ ನಿಲ್ಲಿಸಿದ್ದು ಟ್ರಂಪ್;‌ ಅಮೆರಿಕ ವಿದೇಶಾಂಗ ವಕ್ತಾರ ಟ್ಯಾಮಿ ಬ್ರೂಸ್

Most read

ವಾಷಿಂಗ್ಟನ್: ಭಾರತ-ಪಾಕಿಸ್ತಾನ ನಡುವಿನ ಸಂಭವನೀಯ ಯುದ್ಧವನ್ನು ತಡೆದಿದ್ದೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಂದು ಅಮೆರಿಕ ದೇಶದ ವಿದೇಶಾಂಗ ಇಲಾಖೆ ವಕ್ತಾರ ಟ್ಯಾಮಿ ಬ್ರೂಸ್ ಪುನರುಚ್ಚರಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಭಾರತ–ಪಾಕಿಸ್ತಾನದ ನಡುವೆ ಮೇ ತಿಂಗಳಿನಲ್ಲಿ ನಡೆದ ಸಂಘರ್ಷವನ್ನು ಉಲ್ಲೇಖಿಸಿ ದಾಳಿಯ ಸ್ವರೂಪವನ್ನು ತಿಳಿದು ಅಮೆರಿಕ ತನ್ನ ಕೈಲಾದ ಸಹಾಯವನ್ನು ಮಾಡಿದೆ. ಇಡೀ ಜಗತ್ತು ಶಾಂತಿಯಿಂದ ಇರಬೇಕು ಎನ್ನುವುದು ಟ್ರಂಪ್ ಉದ್ದೇಶವಾಗಿದೆ.  ಈ ನಿಟ್ಟಿನಲ್ಲಿ ಜಗತ್ತಿನಲ್ಲಿ ಎಲ್ಲೇ  ಸಂಘರ್ಷಗಳು ನಡೆದಾಗ ಸಂಧಾನದ ಮೂಲಕ ಬಗೆಹರಿಸಲು ಅಮೆರಿಕ ಮುಂದಾಗುತ್ತದೆ ಎಂದು ಹೇಳಿದ್ದಾರೆ.

ಭಾರತ – ಪಾಕಿಸ್ತಾನ ಜೊತೆ ನಮ್ಮ ಸಂಬಂಧವು ಮೊದಲಿನಂತೆಯೇ ಇದೆ. ಆ ದೇಶಗಳೊಂದಿಗೆ ಕೆಲಸ ಮಾಡಲು ಅಮೆರಿಕ ಸದಾ ಬಯಸುತ್ತದೆ ಎಂದೂ ಹೇಳಿದ್ದಾರೆ.

ವಿಶ್ವದಾದ್ಯಂತ ಹಲವು ದೇಶಗಳ ನಡುವಿನ ಸಂಘರ್ಷಗಳನ್ನು ಕೊನೆಗೊಳಿಸುವಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಮಹತ್ವದ ಪಾತ್ರ ವಹಿಸಿದ್ದಾರೆ ಎಂದೂ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

More articles

Latest article