ಪಾಕ್ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದೇವೆ: ಭಾರತೀಯ ಸೇನೆ ಮಾಹಿತಿ

Most read

ನವದೆಹಲಿ: ಪಾಕಿಸ್ತಾನದ ಸಶಸ್ತ್ರ ಪಡೆಗಳು ಪಶ್ಚಿಮ ಗಡಿ ಪ್ರದೇಶದಲ್ಲಿ ಮೇ 8 ಹಾಗೂ 9 ರ ರಾತ್ರಿ ನಡೆಸಿದ ದಾಳಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ಪಾಕಿಸ್ತಾನದ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಿರಂತರವಾಗಿ ಬಾರಿ ಕದನ ವಿರಾಮ ಉಲ್ಲಂಘಿಸಿವೆ‘ ಎಂದು ಸೇನೆಯು ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದೆ.

ಪಾಕಿಸ್ತಾನದ ದುಷ್ಕೃತ್ಯಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂಬುದನ್ನು ಪ್ರತಿಪಾದಿಸುವ ಆಪರೇಷನ್‌ ಸಿಂಧೂರದ ವಿಡಿಯೊ ತುಣುಕೊಂದನ್ನು ಸೇನೆ ಹಂಚಿಕೊಂಡಿದೆ. ಆಪರೇಷನ್‌ ಸಿಂಧೂರ – ಪಾಕಿಸ್ತಾನ ಸಶಸ್ತ್ರ ಪಡೆಗಳು ಪಶ್ಚಿಮ ಗಡಿಯಲ್ಲಿ ಮೇ 8–9ರ ಮಧ್ಯರಾತ್ರಿ ಬಹಳ ಹೊತ್ತು ಡ್ರೋಣ್ ಹಾಗೂ ಇತರ ಶಸ್ತ್ರಾಸ್ತ್ರಗಳ ಮೂಲಕವೂ ಅನೇಕ ಬಾರಿ ದಾಳಿ ನಡೆಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ನಿಯಂತ್ರಣ ರೇಖೆಯುದ್ದಕ್ಕೂ ಹಲವು ಸಲ ಕದನ ವಿರಾಮವನ್ನೂ ಉಲ್ಲಂಘಿಸಲಾಗಿದೆ ಎಂದೂ ತಿಳಿಸಿದೆ.

More articles

Latest article