ಆದಾಯ ತೆರಿಗೆಯಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ: ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದೇನು?

Most read

2024ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಆದಾಯ ತೆರಿಗೆ ವಿಷಯವಾಗಿ ಹಲವು ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಇನ್ಮುಂದೆ ಟಿಡಿಎಸ್ ಕಟ್ಟುವುದು ತಡವಾದರೆ ದಂಡ ಹಾಕುವುದಿಲ್ಲ ಎನ್ನಲಾಗಿದೆ. ಆದಾಯ ತೆರಿಗೆ ಕಟ್ಟೋದು ವಿಳಂಬವಾದ್ರೆ ಶಿಕ್ಷೆಯೂ ಇರುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ಈ ಕುರಿತು ಬಜೆಟ್ ನಲ್ಲಿ, ಆದಾಯ ತೆರಿಗೆಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ 75 ಸಾವಿರಕ್ಕೆ ಏರಿಕೆ ಮಾಡಿದ್ದು, 3 ಲಕ್ಷದ ಆದಾಯದವರೆಗೆ ಯಾವುದೇ ರೀತಿ ತೆರಿಗೆ ಇರುವುದಿಲ್ಲ ಎಂದು ಹೇಳಿದೆ.

ಮಧ್ಯಮ ವರ್ಗದವರಿಗೆ ತೆರಿಗೆ ಬಾರ ಹಾಕದೆ ಹಳೆಯ ತೆರಿಗೆ ಪದ್ಧತಿಯನ್ನು ಮುಂದುವರೆಸುವ ಮೂಲಕ ತೆರಿಗೆ ಪದ್ದತಿ ಬಳಸುವವರಿಗೆ ಹೊಸ ಸ್ಲ್ಯಾಬ್ ಘೋಷಿಸಲಾಗಿದೆ. 3 ರಿಂದ 7 ಲಕ್ಷದ ಆದಾಯಕ್ಕೆ ಶೇಕಡ 5ರಷ್ಟು ತೆರಿಗೆ 7 ರಿಂದ 10 ಲಕ್ಷದ ಆದಾಯಕ್ಕೆ ಶೇಕಡ 10ರಷ್ಟು ತೆರಿಗೆ 10 ರಿಂದ 12 ಲಕ್ಷದ ಆದಾಯಕ್ಕೆ ಶೇಕಡ 15ರಷ್ಟು ತೆರಿಗೆ 12 ರಿಂದ 15 ಲಕ್ಷದ ಆದಾಯಕ್ಕೆ ಶೇಕಡ 20 ರಷ್ಟು ತೆರಿಗೆ 15 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇಕಡ 30ರಷ್ಟು ತೆರಿಗೆ ಕಟ್ಟಬೇಕು ಎಂದು ಹೇಳಿದ್ದಾರೆ.

ಏಂಜಲ್ ಟ್ಯಾಕ್ಸ್ ರದ್ದು ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಇ-ಕಾಮರ್ಸ್ ವ್ಯವಹಾರದ ಮೇಲಿನ 1% ತೆರಿಗೆಯನ್ನು 0.1%ಗೆ ಇಳಿಕೆ ಮಾಡಲು ತೀರ್ಮಾನ ಮಾಡಲಾಗಿದೆ.

More articles

Latest article