ಮಾಲೂರು: ಬಿಸಿಯೂಟ ಸೇವಿಸಿ ಕೈ ತೊಳೆಯಲು ಹೋಗಿದ್ದ ಬಾಲಕ ನೀರಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟ ಧಾರುಣ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕಡದನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮೃತಪಟ್ಟ ಬಾಲಕ ಸುರೇಂದ್ರ (9) ಮೂರನೇ ತರಗತಿಯಲ್ಲಿ ಓದುತ್ತಿದ್ದ.
ಶಾಲೆಯ ನೀರಿನ ಸಂಪ್ ಮುಚ್ಚಿರಲಿಲ್ಲ. ಊಟದ ನಂತರ ಕೈತೊಳೆಯಲು ಹೋದಾಗ ಈ ದುರ್ಘಟನೆ ನಡೆದಿದೆ. ಬಾಲಕನ ಸಾವಿಗೆ ಶಿಕ್ಷಕ ಶೇಖರ್ ಬಾಬು, ಮತ್ತು ಅಡುಗೆ ಸಹಾಯಕಿ ವಸಂತಮ್ಮ ಅವರ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ
ಶಿಕ್ಷಕ ಹಾಗೂ ಅಡುಗೆ ಸಹಾಯಕಿ ವಿರುದ್ಧ ಮಾಲೂರು ಪೋಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಸ್ಥಳಕ್ಕೆ ಶಾಸಕ ನಂಜೇಗೌಡ, ತಹಶೀಲ್ದಾರ್ ರೂಪ, ಹಾಗೂ ಬಿಇಒ ಕೆಂಪಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.

 
                                    