ಛತ್ತೀಸಗಢದಲ್ಲಿ 210 ನಕ್ಸಲರು ಶರಣಾಗತಿ; ಶಸ್ತ್ರಾಸ್ತ್ರಗಳ ಹಸ್ತಾಂತರ

Most read

ಬಸ್ತಾರ್: ಛತ್ತೀಸಗಢದ ಬಸ್ತಾರ್ ಜಿಲ್ಲೆಯ ಜಗದಲ್‌ ಪುರದಲ್ಲಿ 210 ನಕ್ಸಲರು ಶರಣಾಗಿದ್ದಾರೆ. ಶರಣಾದವರಲ್ಲಿ ನಿಷೇಧಿತ ಮಾವೋವಾದಿ ಸಂಘಟನೆಯ ಓರ್ವ ಕೇಂದ್ರ ಸಮಿತಿ ಸದಸ್ಯ, ದಂಡಕಾರಣ್ಯ ವಿಶೇಷ ವಲಯ ಸಮಿತಿಯ ನಾಲ್ವರು ನಕ್ಸಲರು, ವಿಭಾಗೀಯ ಸಮಿತಿಯ 21 ಸದಸ್ಯರು ಮತ್ತು 61 ಪ್ರದೇಶ ಸಮಿತಿ ಸದಸ್ಯರು ಸೇರಿದ್ದಾರೆ.

ಇವರೆಲ್ಲರೂ ಇಂದು ಪೊಲೀಸರು ಹಾಗೂ ಭದ್ರತಾ ಪಡೆಯ ಎದುರು ಶರಣಾಗಿದ್ದಾರೆ. ಈ ಸಂದರ್ಭದಲ್ಲಿ ನಕ್ಸಲರು ಎಕೆ 47 ರೈಫಲ್‌ಗಳು, ಸ್ವಯಂ ಲೋಡಿಂಗ್ ರೈಫಲ್‌ಗಳು, ಐಎನ್‌ ಎಸ್‌ ಎಎಸ್‌  ರೈಫಲ್‌ ಗಳು, ಲೈಟ್ ಮೆಷಿನ್ ಗನ್ 303 ರೈಫಲ್‌ ಗಳು, ಕಾರ್ಬೈನ್‌ ಗಳು ಮತ್ತು 11 ಬ್ಯಾರೆಲ್ ಗ್ರೆನೇಡ್ ಲಾಂಚರ್‌ ಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು.

ಇವರಿಗೆ ಪೊಲೀಸರು, ಭದ್ರತಾ ಪಡೆ ಹಾಗೂ ಸ್ಥಳೀಯ ಬುಡಕಟ್ಟು ಸಮುದಾಯದ ಮುಖಂಡರು ಸ್ವಾಗತ ಕೋರಿದರು.

More articles

Latest article