ಗದಗ : ಪ್ರಚಾರದಲ್ಲಿ ಪ್ರತಿಯೊಂದು ಕುಟುಂಬದಿಂದ ಒಬ್ಬ ಮಹಿಳೆ ಭಾಗಿಯಾಗುತ್ತಾರೆ. ಮಹಿಳೆಯರ ಉತ್ಸಾಹ, ಸ್ಪಂದನೆ ನೋಡಿದ್ರೆ 100ಕ್ಕೆ 90 ರಷ್ಟು ಮತ ಕಾಂಗ್ರೆಸ್ ಬರುತ್ತೆ ಎಂದು ಎಚ್ ಕೆ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ ಮಾತನಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗ್ಯಾರಂಟಿ. ಮೊದಲ ಹಂತದ ಚುನಾವಣೆಯಲ್ಲಿ 8 ಕ್ಕಿಂತ ಹೆಚ್ಚು ಗೆಲ್ಲುತ್ತೇವೆ. ಎರಡನೇ ಹಂತದ ಚುನಾವಣೆಯಲ್ಲಿ 12 ಸ್ಥಾನ ಗೆಲ್ಲುತ್ತೇವೆ. ಒಟ್ಟು ರಾಜ್ಯದಲ್ಲಿ 20 ಅಂಕಿ ಮುಟ್ಟುತ್ತೇವೆ. ಪ್ರಚಾರದಲ್ಲಿ ಪ್ರತಿಯೊಂದು ಕುಟುಂಬದಿಂದ ಒಬ್ಬ ಮಹಿಳೆ ಭಾಗಿಯಾಗುತ್ತಾರೆ. ಮಹಿಳೆಯರ ಉತ್ಸಾಹ, ಸ್ಪಂದನೆ ನೋಡಿದ್ರೆ 100ಕ್ಕೆ 90 ರಷ್ಟು ಮತ ಕಾಂಗ್ರೆಸ್ ಬರುತ್ತೆ.
ಪ್ರಧಾನಿ ನರೇಂದ್ರ ಮೋದಿ ನಿಂತ ನೆಲ ಅಲುಗಾಡುತ್ತಿದೆ. ಮೋದಿ ಅವ್ರ ಮಾತು ಕೇಳಿದ್ರೆ ಅವ್ರ ನೆಲ ನಡಗುತ್ತಿದೆ. ಗೆಲುವು ಅವ್ರಿಗೆ ದೂರದ ಕನಸು ಅನ್ನೋದು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷ ಹಾವೇರಿ ಗದಗ ಲೋಕಸಭೆ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ಗೇಲ್ತೀವಿ.
ಕಾಂಗ್ರೆಸ್ ಗ್ಯಾರಂಟಿ ನಂಬಬೇಡಿ ಬೊಮ್ಮಾಯಿ ಹೇಳಿಕೆ ವಿಚಾರ.
ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿಗೆ ಎಚ್ ಕೆ ಪಾಟೀಲ ತಿರುಗೇಟು ನೀಡಿದ್ದು, ಎಂಟು ತಿಂಗಳಿಂದ ಗ್ಯಾರಂಟಿ ಯೋಜನೆ ಕೊಡುತ್ತಿದ್ದೇವೆ. ಗ್ಯಾರಂಟಿ ಕಾಗದ ತಗೊಂಡು ನೀವು ಹರಿಬಹುದು. ಜನರ ಮನಸ್ಸಿನಲ್ಲಿ ಮೂಡಿದ ವಿಶ್ವಾಸ, ನಂಬಿಕೆ ಯಾರು ಏನ್ ಮಾಡಿದ್ರು ಅಳಿಸಲು ಸಾಧ್ಯವಿಲ್ಲ. ಮೋದಿ ಅವರಿಗೆ ಗ್ಯಾರಂಟಿ ಭಯ ಕಾಡುತ್ತಿದೆ. ಸಿದ್ದರಾಮಯ್ಯ ಗ್ಯಾರಂಟಿ ಶಬ್ದವನ್ನ ಮೋದಿ ಬರೆದುಕೊಳ್ಳುತ್ತಿದ್ದಾರೆ. ಗ್ಯಾರಂಟಿನೂ ಅಲ್ಲ. ಅವ್ರ ಗ್ಯಾರಂಟಿಗೆ ವಾರಂಟಿನೇ ಇಲ್ಲ. ಹೀಗಾಗಿ ಮೋದಿ ಅವ್ರು ಈ ಚುನಾವಣೆಯಲ್ಲಿ ಏನೂ ಯಶಸ್ವಿಯಾಗಲ್ಲ ಎಂದಿದ್ದಾರೆ.
ಗದಗದಲ್ಲಿ ಎಂಎಲ್ಸಿ ಸಲೀಂ ಅಹ್ಮದ್ ಮಾತನಾಡಿ, ಈ ಕ್ಷೇತ್ರದಲ್ಲಿ ಆನಂದ ಸ್ವಾಮಿ ಗಡ್ಡದೇವರಮಠ ಅತ್ಯಂತ ಹೆಚ್ಚು ಮತಗಳಿಂದ ಗೆಲ್ತಾರೆ. ಬಸವರಾಜ ಬೊಮ್ಮಾಯಿ ಅವರು ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನ ನಂಬಿ ಮತ ಕೊಟ್ಟಿದ್ದಾರೆ. ನಮ್ಮ ಅಭ್ಯರ್ಥಿ ಗೆಲುವಿಗೆ ಗ್ಯಾರಂಟಿ ಶ್ರೀರಕ್ಷೆ. ಹತ್ತು ವರ್ಷಗಳಿಂದ ಮೋದಿಯವರು ಬರೀ ಸುಳ್ಳು ಹೇಳಿದ್ದಾರೆ. ಕರ್ನಾಟಕದಲ್ಲಿ ಕನಿಷ್ಠ 20 ಸೀಟ್ ಗೆಲ್ಲುತ್ತೇವೆ ಎಂದು ಭರವಸೆ ನೀಡಿದೆ ಎಂದಿದ್ದಾರೆ.