ಪತ್ನಿ ಕೊಂದು ಮಗುವಿನೊಂದಿಗೆ ಪರಾರಿಯಾದ ಪತಿರಾಯ

ಬೆಂಗಳೂರು: ಪತಿಯೇ ಪತ್ನಿಯ ಕುತ್ತಿಗೆಯನ್ನು ದುಪ್ಪಟ್ಟಾದಿಂದ ಬಿಗಿದು ಕೊಲೆ ಮಾಡಿ ನಾಲ್ಕು ವರ್ಷದ ಮಗುವಿನೊಂದಿಗೆ ಪರಾರಿಯಾಗಿರುವ ಪ್ರಕರಣ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಗಂಗೊಂಡನಹಳ್ಳಿಯ ಮೂರನೇ ಮುಖ್ಯರಸ್ತೆಯ ನಿವಾಸಿ ಗೌಸಿಯಾ ಎಂಬುವರನ್ನು ಆಕೆಯ ಪತಿ ಇಮ್ರಾನ್ ಖಾನ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೌಸಿಯಾ ಸಹೋದರ ಜಮೀರ್ ಉಲ್ಲಾ ಖಾನ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಮ್ರಾನ್ ಖಾನ್  ಗಂಗೊಂಡನಹಳ್ಳಿಯಲ್ಲೇ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ವಿವಾಹವಾದ ಹೊಸದರಲ್ಲಿ ದಂಪತಿ ಅನೋನ್ಯವಾಗಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಸದಾ ಜಗಳ ನಡೆಯುತ್ತಿತ್ತು ಎಂದು ಗೌಸಿಯಾ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.
ಗಲಾಟೆಯಿಂದ ಬೇಸತ್ತು ಗೌಸಿಯಾ ಮಗುವಿನ ಜತೆ ತವರು ಮನೆಗೆ ಆಗಮಿಸಿ ವಾಸವಿದ್ದರು. ನಂತರ ಗಂಡನ ಮನೆಗೆ ತೆರಳಿದ್ದರು.ನಂತರವೂ ಗಲಾಟೆ ನಡೆದು ಆರೋಪಿ ಕೊಲೆ ಮಾಡಿದ್ದಾನೆ. ವೆಲ್ಡಿಂಗ್‌ ಶಾಪ್‌ ಮಾಲೀಕರ ಬಳಿ  ಸಾಲದ ರೂಪದಲ್ಲಿ ಹಣ ಪಡೆದುಕೊಂಡಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.

More articles

Latest article

Most read