Thursday, December 12, 2024

ಸಂಚಾರ ಪೊಲೀಸರ ಕಾರ್ಯಾಚರಣೆ; ತಪ್ಪಿತಸ್ಥರ ವಿರುದ್ಧ 11,340 ಪ್ರಕರಣ, ರೂ. 69.46 ಲಕ್ಷ ದಂಡ ಸಂಗ್ರಹ

Most read

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರು ಮತ್ತು ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು  ಬೆಂಗಳೂರು ನಗರ ಸಂಚಾರ ಪೊಲೀಸರು ಮುಂದುವರೆಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ 11,340 ಪ್ರಕರಣ ದಾಖಲಿಸಿಕೊಂಡು, ರೂ. 69.46 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಉತ್ತರ ವಿಭಾಗದ ಸಂಚಾರ ಪೊಲೀಸರು ಏಳು ದಿನ ನಡೆಸಿದ ಕಾರ್ಯಾಚರಣೆಯಲ್ಲಿ 9,912 ಪ್ರಕರಣ ದಾಖಲಿಸಿಕೊಂಡು, ‍66.46 ಲಕ್ಷ ದಂಡ ಸಂಗ್ರಹಿಸಿದ್ದಾರೆ.

ಉತ್ತರ ವಿಭಾಗದ ವ್ಯಾಪ್ತಿಯಲ್ಲಿ ಉಂಟಾಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕಲು ನವಂಬರ್ 17ರಿಂದ 23ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಒಂದು ವಾರದ ಕಾಲ ಪ್ರತಿದಿನ ಬೆಳಿಗ್ಗೆ 11.30ರಿಂದ ಸಂಜೆ 4ರ ತನಕ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥ ಚಾಲಕರನ್ನು ಪತ್ತೆಹಚ್ಚಿ
ದಂಡ ಹಾಕಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದ್ದಾರೆ.

 ಅತಿವೇಗದ ವಾಹನ ಸಂಚಾರ ಮಾಡುತ್ತಿದ್ದವರ ವಿರುದ್ಧ154, ಮದ್ಯ ಸೇವಿಸಿ
ಅಡ್ಡಾದಿಡ್ಡಿ ಚಾಲನೆಯ 12, ಅತಿವೇಗದ ವಾಹನ ಸಂಚಾರ 154, ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವರ ವಿರುದ್ಧ 107, ಮದ್ಯ ಸೇವಿಸಿ ಚಾಲನೆ 223, ಸೈಲೆನ್ಸರ್ ಮಾರ್ಪಾಡು ಮಾಡಿದ್ದವರ ವಿರುದ್ಧ 8, ಕರ್ಕಶ ಹಾರ್ನ್ ಅಳವಡಿಸಿದ್ದವರ ವಿರುದ್ಧ  8, ಡಿಎಲ್‌  ಇಲ್ಲದವರ ವಿರುದ್ಧ 134, ಸಿಗ್ನಲ್‌ ಜಂಪ್‌ ಮಾಡಿದ್ದವರ ವಿರುದ್ಧ 92, ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದ್ದ 337, ನಿರ್ಬಂಧಿತ ರಸ್ತೆಗಳಲ್ಲಿ ವಾಹನ ಸಂಚಾರ ಮಮಾಡುತ್ತಿದ್ದ 1,495, ಸಮವಸ್ತ್ರರಹಿತ ವಾಹನ ಚಾಲನೆ 107, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದ್ದ 117, ದ್ವಿಚಕ್ರ ವಾಹನಗಳಲ್ಲಿ
ಮೂವರು ಕುಳಿತು ಸವಾರಿ ಮಾಡುತ್ತಿದ್ದವರ ವಿರುದ್ಧ 154, ಸೀಟ್ ಬೆಲ್ಟ್ ರಹಿತ
ಚಾಲನೆಗಾಗಿ  301, ಹೆಲ್ಮಟ್‌ರಹಿತ ಚಾಲನೆಗಾಗಿ 1,194 ಸೇರಿದಂತೆ ಒಟ್ಟು 9,912 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೂರ್ವ ವಿಭಾಗದಲ್ಲೂ ಕಾರ್ಯಾಚರಣೆ ನಡೆಸಿದ ಪೊಲೀಸರು, ನಿಯಮ ಉಲ್ಲಂಘಿಸಿದ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಒಟ್ಟು 626 ಪ್ರಕರಣ ದಾಖಲಿಸಿ ರೂ. 73.13 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಸಂಚಾರ ವಿಭಾಗದ 50 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ 802 ಪ್ರಕರಣಗಳನ್ನು ದಾಖಲಿಸಲಾಗಿದೆ.


More articles

Latest article