Friday, December 6, 2024

ಹುಲಿಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ; ಭಕ್ತರು ಅರ್ಪಿಸಿದ ಒಟ್ಟು ನಗದು, ಚಿನ್ನ-ಬೆಳ್ಳಿ ಎಷ್ಟು ಗೊತ್ತೇ?

Most read

ಉತ್ತರ ಕರ್ನಾಟಕದ ಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾಗಿರುವ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬರೋಬ್ಬರಿ ಒಂದು ಕೋಟಿ ರೂಪಾಯಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ. ಜತೆಗೆ ಚಿನ್ನ ಬೆಳ್ಳಿಯನ್ನು ಕಾಣಿಕೆ ಕೂಡ ಭಕ್ತಾದಿಗಳು ಸಲ್ಲಿಸಿದ್ದಾರೆ.

ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಹುಂಡಿ ಎಣಿಕೆ ಕಾರ್ಯ ನಡೆಯಿತು. 52 ದಿನಗಳಲ್ಲಿ 1.11 ಕೋಟಿ ರೂ.ಹಣ ಸಂಗ್ರಹ. 333 ಗ್ರಾಂ ಚಿನ್ನ, 11.300 ಕೆಜಿ ಬೆಳ್ಳಿ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ. ಇನ್ನು 2023 ನವೆಂಬರ್‌ನಲ್ಲಿ ಎಣಿಕೆ ಕಾರ್ಯ ನಡೆದಾಗಲೂ ಒಂದು ಕೋಟಿ ರೂ. ಅಧಿಕ ಕಾಣಿಕೆ ಸಂಗ್ರಹವಾಗಿತ್ತು.

More articles

Latest article