ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ ಎಚ್ಎಂಪಿ ವೈರಸ್ ಪತ್ತೆ

Most read

ಬೆಂಗಳೂರು: ಚೀನಾ ದೇಶದಲ್ಲಿ ಕಂಡು ಬರುತ್ತಿದೆ ಎನ್ನಲಾಗುತ್ತಿರುವ ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್‌ಎಂಪಿವಿ) ವೈರಸ್‌ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಪತ್ತೆಯಾಗಿದೆ. ಶೀತ, ಜ್ವರ ಕಾಣಿಸಿಕೊಂಡಿದ್ದರಿಂದ ಮಗುವನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷೆ ಮಾಡಿದಾಗ ಎಚ್ಎಂಪಿವಿ ಪತ್ತೆಯಾಗಿದೆ.

ಸಾಮಾನ್ಯವಾಗಿ ಚಳಿಗಾಲ ಬಂದಾಗ ಶೀತ, ಜ್ವರ ನೆಗಡಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ವೈರಾಣುವಿನಿಂದಲೇ ಇಂತಹ ರೋಗಗಳು ಕಾಣಿಸಿಕೊಳ್ಳುತ್ತವೆ.  ವೈರಾಣು ಆಗಾಗ ತನ್ನ ಗುಣ ಲಕ್ಷಣಗಳನ್ನು ಬದಲಾಯಿಸುತ್ತಿರುತ್ತದೆ. ಈ ಬಾರಿ ಅದಕ್ಕೆ ಎಚ್ಎಂಪಿವಿ ಎಂದು ಹೆಸರಿಡಲಾಗಿದೆ. ಇದು ಅಪಾಯಕಾರಿ ವೈರಸ್ ಅಲ್ಲ ಇದು ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ. ಧನಂಜಯ ಟಿ. ಎನ್. ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಜ್ವರ, ಶೀತ ಬಂದಿದ್ದವರಿಗೆ ಎಚ್ಎಂಪಿವಿ ಬಂದು ಹೋಗಿರಬಹುದು. ಪರೀಕ್ಷೆ ಮಾಡದೇ ಇದ್ದರೆ ಪತ್ತೆಯಾಗಿರುವುದಿಲ್ಲ.  ಇದು ಸಾಮಾನ್ಯ ವೈರಸ್ ಆಗಿದ್ದು ಆತಂಕ ಪಡುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವೈರಸ್‌ ನಿರ್ವಹಣೆ ಕುರಿತು ಆರೋಗ್ಯ ಇಲಾಖೆಯು ವಿಶ್ವ ಅರೋಗ್ಯ ಸಂಸ್ಥೆ, ಭಾರತದ ಅರೋಗ್ಯ ಸಚಿವಾಲಯದ ನಿರ್ದೇಶನದಂತೆ ಕಾರ್ಯ ನಿರ್ವಹಿಸಲಿದೆ ಎಂದೂ ತಿಳಿಸಿದ್ದಾರೆ.

More articles

Latest article