ನಾರ್ವೆ ಪತ್ರಕರ್ತೆ ಹೆಲ್ಲೆ ಲೈಂಗ್ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳು ಸಸ್ಪೆಂಡ್: ಮೋದಿ ಪ್ರಶ್ನಿಸಿದ್ದಕ್ಕೆ ಈ ಶಿಕ್ಷೆನಾ?

ಒಸ್ಲೋ (ನಾರ್ವೆ): ಭಾರತ ಪ್ರಧಾನಿ ನರೇಂದ್ರ ಮೋದಿ ನಾರ್ವೆಗೆ ಭೇಟಿ ನೀಡಿದ ವೇಳೆ ಅವರನ್ನು ಪ್ರಶ್ನಿಸಿದ್ದಕ್ಕಾಗಿ ವೈರಲ್ ಆಗಿದ್ದ ನಾರ್ವೇಜಿಯನ್ ಪತ್ರಕರ್ತೆ ಹೆಲ್ಲೆ ಲೈಂಗ್ ಅವರ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಈ ವಿಷಯವನ್ನು ಸ್ವತಃ ಹೆಲ್ಲೆ ಲೈಂಗ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಡಾಗ್ಸಾವಿಸೆನ್ ಪತ್ರಿಕೆಯ ಪತ್ರಕರ್ತೆಯಾದ ಹೆಲ್ಲೆ ಲೈಂಗ್ ಅವರು ಮೋದಿ ಮತ್ತು ನಾರ್ವೆ ಪ್ರಧಾನಿ ಜೋನಾಸ್ ಗಾರ್ ಸ್ಟೋರ್ ಅವರ ಜಂಟಿ ಮಾಧ್ಯಮ ಸಭೆಯ ನಂತರ ಮೋದಿ ಅವರನ್ನು “ಪ್ರೆಸ್‌ಗೆ ಪ್ರಶ್ನೆ ಕೇಳಲು ಅವಕಾಶ ನೀಡುವುದಿಲ್ಲವೇ?” ಎಂದು ಪ್ರಶ್ನಿಸಿದ್ದರು. ಈ ಘಟನೆ ವೈರಲ್ ಆಗಿ ಭಾರತೀಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಈ ಘಟನೆಯ ನಂತರ ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳಿಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ಹೆಲ್ಲೆ ಲೈಂಗ್ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡ ಅವರು, “ಪ್ರೆಸ್ ಸ್ವಾತಂತ್ರ್ಯಕ್ಕಾಗಿ ಸಣ್ಣ ಬೆಲೆ ಇದು” ಎಂದು ಬರೆದಿದ್ದಾರೆ.
ಇದುವರೆಗೆ ಮೆಟಾ ಕಂಪನಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಹೆಲ್ಲೆ ಅವರು ಎಕ್ಸ್‌ನಲ್ಲಿ ಸಕ್ರಿಯರಾಗಿದ್ದು, ತಮ್ಮ ಖಾತೆಗಳನ್ನು ಮರಳಿ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಷಯವು ಭಾರತ- ನಾರ್ವೆ ಸಂಬಂಧಗಳ ನಡುವೆ ಮತ್ತು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

More articles

Latest article

Most read