ಬೆಂಗಳೂರಿನಲ್ಲಿ ರಾತ್ರಿಯಿಡೀ ಧೋ ಎಂದು ಸುರಿದ ಮಳೆ: ಮನೆ, ಅಪಾರ್ಟ್ಮೆಂಟ್ ಗಳಿಗೆ ನುಗ್ಗಿದ ನೀರು

ಬೆಂಗಳೂರು, ಅ. 1 : ರಾಜಧಾನಿ ಬೆಂಗಳೂರಿನಲ್ಲಿ ಸತತ ಮೂರನೇ ದಿನವೂ ಮಳೆಯ ಆರ್ಭಟ ಮುಂದುವರಿದಿದ್ದು, ಬುಧವಾರ ಸಂಜೆ ಆರಂಭವಾದ ಭಾರೀ ಮಳೆ ಹಲವು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಸಿದೆ. ರಾತ್ರಿ ಕೂಡ ಮಳೆ ಮುಂದುವರಿದ ಪರಿಣಾಮ ತಗ್ಗು ಪ್ರದೇಶಗಳು, ರಸ್ತೆಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ನಗರದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿತ್ತು. ನಾಗವಾರ, ಥಣಿಸಂದ್ರ, ಜಕ್ಕೂರು, ಯಲಹಂಕ, ಹೆಬ್ಬಾಳ, ಮಹದೇವಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ನೀರು ರಸ್ತೆಗೆ ನುಗ್ಗಿದೆ. ಥಣಿಸಂದ್ರ–ನಾಗವಾರ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಜಕ್ಕೂರು–ಯಲಹಂಕ ಭಾಗದಲ್ಲಿ ಅಂಡರ್‌ಪಾಸ್‌ಗಳು ಜಲಾವೃತವಾಗಿದ್ದು, ವಿದ್ಯಾಶಿಲ್ಪ ರೈಲ್ವೆ ಕೆಳಸೇತುವೆ, ರಾಷ್ಟ್ರೋತ್ಥಾನ ಮೇಲ್ಸೇತುವೆ, ಚೌಡಪ್ಪ ಲೇಔಟ್ ಹಾಗೂ ಥಣಿಸಂದ್ರ ರಸ್ತೆಯಲ್ಲೂ ನೀರು ನಿಂತಿರುವ ಬಗ್ಗೆ ವರದಿಯಾಗಿದೆ.

ಮಳೆ ನೀರು ನುಗ್ಗಿದ ಪರಿಣಾಮ ಕೆಲವು ಅಪಾರ್ಟ್‌ಮೆಂಟ್‌ಗಳ ಆವರಣದಲ್ಲೂ ನೀರು ಸಂಗ್ರಹವಾಗಿದೆ. ಮಳೆ ಹೆಚ್ಚಾದ ವೇಳೆ ಹಲವು ಕಡೆ ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿವೆ. ಹೆಬ್ಬಾಳ ರಿಂಗ್ ರಸ್ತೆ, ಹುಡಿ, ಸಹಕಾರನಗರ, ವೈಟ್‌ಫೀಲ್ಡ್, ಮಹದೇವಪುರ ಸೇರಿದಂತೆ ಹಲವು ಕಡೆ ಸಂಚಾರ ದಟ್ಟಣೆ ಉಂಟಾಗಿದೆ.

ಮರಗಳು ಧರೆಗೆ, ಸಂಚಾರ ಅಸ್ತವ್ಯಸ್ತ

ಭಾರೀ ಮಳೆ ಹಾಗೂ ಗಾಳಿಗೆ ವಿಜ್ಞಾನನಗರ ಮತ್ತು ವಿದ್ಯಾಸೌಧ ಶಾಲೆ ಬಳಿಯೂ ಮರಗಳು ಬಿದ್ದಿದ್ದು, ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಸೆಪ್ಟೆಂಬರ್ 30ರ ಬೆಳಗ್ಗೆ 8.30ರಿಂದ ಸಂಜೆ 5.30ರವರೆಗೆ ಎಚ್‌ಎಎಲ್‌ನಲ್ಲಿ 17.1 ಮಿ.ಮೀ., ಜಿಕೆವಿಕೆಯಲ್ಲಿ 8.5 ಮಿ.ಮೀ. ಮಳೆ ದಾಖಲಾಗಿತ್ತು.

ಇಂದೂ ಮಳೆ ಸಾಧ್ಯತೆ

ರಾಜ್ಯದಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ಐಎಂಡಿ ಪ್ರಕಾರ ಅಕ್ಟೋಬರ್ 1ರಂದು ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಸಾಧ್ಯತೆ ಇದ್ದು, ಗುಡುಗು-ಸಿಡಿಲು ಮತ್ತು ಬಿರುಗಾಳಿಯ ಮುನ್ಸೂಚನೆಯೂ ಇದೆ. ಉತ್ತರ ಒಳನಾಡಿನಲ್ಲೂ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಅಕ್ಟೋಬರ್ 1ರವರೆಗೂ ಕೆಲವೆಡೆ ಭಾರೀ ಮಳೆ, ಗುಡುಗು ಸಹಿತ ಮಳೆ ಹಾಗೂ ಗಂಟೆಗೆ 30–40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯನ್ನು ಐಎಂಡಿ ಸೂಚಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆ

ಬುಧವಾರ ರಾಜ್ಯದ ಹಲವು ಭಾಗಗಳಲ್ಲಿ ಮಳೆ ದಾಖಲಾಗಿದ್ದು, ಬೆಳಗಾವಿ, ಕೊಪ್ಪಳ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆಯಾಗಿದೆ. ಸೆಪ್ಟೆಂಬರ್ 30ರಂದು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿತ್ತು. ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ-ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳು ಪಟ್ಟಿಯಲ್ಲಿದ್ದವು.

ಮುಂದಿನ 24 ಗಂಟೆಗಳಲ್ಲೂ ಮಳೆ ಸಾಧ್ಯತೆ ಇರುವುದರಿಂದ ಬೆಂಗಳೂರಿನ ತಗ್ಗು ಪ್ರದೇಶಗಳು, ಅಂಡರ್‌ಪಾಸ್‌ಗಳು ಹಾಗೂ ಜಲಾವೃತ ರಸ್ತೆಗಳಲ್ಲಿ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

More articles

Latest article

Most read