ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದಿಂದ ಅ. 16ರ ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಭಾರೀ ಮಳೆ ಶುರುವಾಗಿದ್ದು, ಸಿಲಿಕಾನ್ ಸಿಟಿ ವಾಟರ್ ಸಿಟಿಯಾಗಿ ಬದಲಾಗಿದೆ. ಬೆಳಗ್ಗೆಯಿಂದಲೇ ಕೆಲವು ಕಡೆ ಜಡಿಮಳೆ, ಕೆಲವು ಕಡೆ ಭಾರೀ ಮಳೆ ಸುರಿದು ಜನಜೀವನ ತೀವ್ರ ಅಸ್ತವ್ಯಸ್ತವಾಗಿದೆ.
ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗಳಿಗೆ ಹೋಗುವ ಉದ್ಯೋಗಿಗಳು ಪರದಾಡುತ್ತಿದ್ದಾರೆ.ಬೆಂಗಳೂರಿನ ತಗ್ಗುಪ್ರದೇಶಗಳಿಗೆ ನೀರು ಹರಿದ ಪರಿಣಾಮ ಹಲವಾರು ಪ್ರಾಂತ್ಯಗಳು ಜಲಾವೃತವಾಗಿವೆ. ಈತರದ ಸಮಸ್ಯೆಗಳ ಪರಿಹಾರಕ್ಕೆ ಈಗ ಬಿಬಿಎಂಪಿ ಸಹಾಯವಾಣಿ ಬಿಡುಗಡೆ ಮಾಡಿದೆ.
ಮಳೆಯಿಂದಾಗಿ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸಹಾಯವಾಣಿಗಳನ್ನು ಆರಂಭಿಸಿದೆ. ಆ ನಂಬರ್ ಗಳು ಹೀಗಿವೆ. ಎಲ್ಲಾ ವಲಯಗಳಿಗೆ ಅನ್ವಯಿಸುವಂಥ ಸಹಾಯವಾಣಿ ಸಂಖ್ಯೆ 1533. ಇನ್ನು, ಬಿಬಿಎಂಪಿ ಕಂಟ್ರೋಲ್ ರೂಂನ ಸಂಖ್ಯೆ 08022660000, 08022975595, 080- 22221188 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. ಇದಲ್ಲದೆ, 94480685700 ವಾಟ್ಸ್ ಆ್ಯಪ್ ಸಂಖ್ಯೆಗೆ ದೂರು ಸಲ್ಲಿಸಹುದು.