ಬೆಂಗಳೂರು ನಗರದಾದ್ಯಂತ ಭಾರಿ ಮಳೆ: ಶಾಲೆ, ಕಾಲೇಜಿಗೆ ನಾಳೆ ರಜೆ ಬಗ್ಗೆ ಡಿಸಿ ಸ್ಪಷ್ಟನೆ

Most read

ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದಿಂದ ಅ. 16ರ ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಭಾರೀ ಮಳೆ ಶುರುವಾಗಿದ್ದು, ಸಿಲಿಕಾನ್ ಸಿಟಿ ವಾಟರ್ ಸಿಟಿಯಾಗಿ ಬದಲಾಗಿದೆ. ಇದರಿಂದಾಗಿ ಶಾಲೆಗೆ ತೆರೆಳಲು ಮಕ್ಕಳು ಪರದಾಡಿದ್ದಾರೆ. ಈ ಕುರಿತು ರಜೆ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ನಾಳೆ ಒಂದು ದಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜುಗಳಿಗೆ ರಜೆ ಕೊಡುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ.

ವಿವಿಗಳ ಜತೆ ಚರ್ಚಿಸಿ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ನಿರ್ಧಾರ ಮಾಡಲಾಗುವುದು. ಕೆಲ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದೆ, ಮರು ಪರೀಕ್ಷೆ ನಿಗದಿ ಕಷ್ಟ. ಹೀಗಾಗಿ ವಿವಿಗಳ ಜೊತೆ ಚರ್ಚಿಸಿ ರಜೆ ನೀಡುವ ಬಗ್ಗೆ ನಿರ್ಧರಿಸುತ್ತೇವೆ. ಮಳೆ ಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಅಕ್ಟೋಬರ್ 17ರಂದು ಸರ್ಕಾರಿ ರಜೆ ಇದೆ ಎಂದು ಹೇಳಿದ್ದಾರೆ.

More articles

Latest article