ಯುರೋಪ್ : ಯುರೋಪ್ ನಲ್ಲಿ ಅತ್ಯಂತ ಉಷ್ಣಾಂಶ ದಾಖಲಾಗಿದ್ದು, ಆಸ್ಪತ್ರೆಗೆ ದಾಖಲಾಗುವವರು ಹಾಗೂ ಸಾವುಗಳ ಸಂಖ್ಯೆ ಏರಿಕೆಯಾಗುತ್ತಿದೆ. ಜರ್ಮನಿ, ಪೋಲೆಂಡ್ ಮತ್ತು ಜೆಕ್ ಗಣರಾಜ್ಯ ಸೇರಿದಂತೆ ಖಂಡದಾದ್ಯಂತ ತಾಪಮಾನದ ದಾಖಲೆಗಳು ಹೆಚ್ಚುತ್ತಲೆ ಇದೆ.
X ನಲ್ಲಿನ ಪೋಸ್ಟ್ನಲ್ಲಿ, WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, “ಯುರೋಪ್ನಲ್ಲಿನ ಹೆಚ್ಚಿನ ತಾಪಮಾನಕ್ಕೆ ಸಂಬಂಧಿಸಿದಂತೆ ಜೂನ್ 21 ರಿಂದ 1,300 ಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ದಾಖಲಾಗಿವೆ ಎಂದು” ಎಂದು ಹೇಳಿದರು.
ಪ್ರಸ್ತುತ ಅತ್ಯಂತ ತೀವ್ರವಾದ ಶಾಖದ ಅಲೆಯಿಂದ ಯೂರೋಪ್ನ ಹಕವು ದೇಶಗಳು ನಲುಗಿವೆ. ತಾಪಮಾನವು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ, ಇದರಿಂದಾಗಿ ಸಾವುಗಳು ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶನಿವಾರ ಯುರೋಪ್ “ಭೂಮಿಯ ಮೇಲೆ ವೇಗವಾಗಿ ತಾಪಮಾನ ಏರಿಕೆಯಾಗುತ್ತಿರುವ ಖಂಡ” ಮತ್ತು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ಹೆಚ್ಚು ಬಿಸಿಯಾಗುತ್ತಿದೆ ಎಂದು ಹೇಳಿದ್ದಾರೆ.
“ಪ್ರಸ್ತುತ 150 ಮಿಲಿಯನ್ ಜನರು ತೀವ್ರ ಶಾಖದಲ್ಲಿ ವಾಸಿಸುತ್ತಿದ್ದಾರೆ, ನೂರಾರು ಜನರು ಸಾವನ್ನಪ್ಪಿದ್ದಾರೆ, ಶಾಲೆಗಳು ಮುಚ್ಚಲ್ಪಟ್ಟಿವೆ, ಗ್ರಿಡ್ಗಳು ಬಕಲ್ ಆಗುತ್ತಿವೆ” ಎಂದು ಅವರು ಹೇಳಿದರು.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಲಿನ ತೀವ್ರತೆಯಿಂದ ಆಗುತ್ತಿರುವ ಹಾನಿಗಳ ಬಗ್ಗೆ ವಿಡಿಯೋ ಹರಿದಾಡುತ್ತಿದೆ. ಕಾರ್ಗಳ ಟೈರ್ಗಳು ಕರಗುತ್ತಿರುವುದು, ಪ್ಯಾನ್ನಲ್ಲಿ ಆಮ್ಲೆಟ್ ಹಾಕುತ್ತಿರುವುದು, ಸಿಗ್ನಲ್ನಲ್ಲಿ ಅಳವಡಿಸಿರುವ ಸಂಕೇತ ಸೂಚಕಗಳು ಕರುಗುವುದು, ಬಿಸಿಲಿನ ತೀವ್ರತೆ ಎಷ್ಟಿದೆ ಎಂಬುದರ ಒಂದು ಸಣ್ಣ ನೋಟವನ್ನು ತೋರಿಸುತ್ತದೆ. ಬಿಸಿಲಿನಲ್ಲಿ ಇಟ್ಟಿರುವ ಪ್ಯಾನ್ಗಳಲ್ಲಿ ಜನರು ಮೊಟ್ಟೆಗಳು ಅಥವಾ ಬೇಕನ್ ಅನ್ನು ಒಡೆದು ನಿಮಿಷಗಳಲ್ಲಿ ಬೇಯಿಸುವ ಹಲವಾರು ವೀಡಿಯೊಗಳಿವೆ.
ಜರ್ಮನಿಯ ಸ್ಥಳೀಯ ವರದಿಗಳ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಶಾಖದಿಂದಾಗಿ ಟ್ರಾಮ್ ಹಳಿಗಳು ಕರಗಿ ಮುಚ್ಚಿಹೋಗಿರುವುದನ್ನು ತೋರಿಸಿವೆ. ಇದರಿಂದಾಗಿ ವಾರಾಂತ್ಯದಲ್ಲಿ ಜರ್ಮನಿಯ ಲೀಪ್ಜಿಗ್ನಲ್ಲಿ ಯಾವುದೇ ಟ್ರಾಮ್ಗಳು ಓಡಲಿಲ್ಲ ಎಂದು DW ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಮತ್ತೊಂದು ವೀಡಿಯೊ ಸಂಕಲನದಲ್ಲಿ ಅಂಗಡಿಗಳ ಒಳಗೆ ಚಾಕೊಲೇಟ್ಗಳು ಮತ್ತು ಇತರ ಆಹಾರ ಪದಾರ್ಥಗಳು ಕರಗುತ್ತಿರುವುದು, ಬಿಸಿಲಿನಲ್ಲಿ ಇರಿಸಲಾದ ಶಾಪಿಂಗ್ ಕಾರ್ಟ್ ಕರಗುತ್ತಿರುವುದು, ಬೂಟುಗಳು ಕರಗುತ್ತಿರುವುದು, ನೇತಾಡುತ್ತಿದ್ದ ಬಾಳೆಹಣ್ಣುಗಳು ಸಿಪ್ಪೆಯಿಂದ ಉದುರುತ್ತಿರುವುದು ಮತ್ತು ಇನ್ನೂ ಹೆಚ್ಚಿನದನ್ನು ತೋರಿಸಲಾಗಿದೆ.

