ಶಿಕ್ಷಣ, ಆರೋಗ್ಯ ಸೇವೆ ಜನರ ಕೈಗೆಟುಕುತ್ತಿಲ್ಲ ಎಂದ ಆರ್‌ ಎಸ್‌ ಎಸ್ ಮುಖ್ಯಸ್ಥ ಭಾಗವತ್‌; ಖಂಡಿಸುವ ಶಕ್ತಿ ಇದೆಯೇ?ʼ ಪ್ರಿಯಾಂಕ್‌  ಖರ್ಗೆ ಪ್ರಶ್ನೆ

Most read

ಬೆಂಗಳೂರು: ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಜನಸಾಮಾನ್ಯರ ಕೈಗೆಟುಕುತ್ತಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ ಎಸ್‌ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಹೇಳಿದ್ದಾರೆ. ಈ ಮೂಲಕ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರ 11 ವರ್ಷಗಳ ಅವದಿ ವಿಫಲವಾಗಿದೆ ಎಂದು ಲೋಕೋಪಯೋಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಎಕ್ಸ್‌ ಮೂಲಕ ತಿರುಗೇಟು ನೀಡಿರುವ ಅವರು ಮೋದಿ ಅವರು ಜನಸಾಮಾನ್ಯರಿಗೆ ಒದಗಿಸಬೇಕಾದ ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಸೌಕರ್ಯಗಳನ್ನು ಮರೆತು ಪಿಆರ್‌ ಮತ್ತು ಫೋಟೋ ಸೆಷನ್ಸ್‌ ನಲ್ಲಿ ನಿರತರಾಗಿದ್ದರು ಎನ್ನುವುದು ಸ್ಪಷ್ಟವಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯವನ್ನು ಸಂಘ ಬಹಿರಂಗವಾಗಿ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

ಧೈರ್ಯವಿದ್ದರೆ ಪ್ರಧಾನಿ ಮೋದಿ ಸಂಪುಟದ ಸಚಿವರು ಭಾಗವತ್ ಅವರ ಹೇಳಿಕೆಯನ್ನು ಖಂಡಿಸಲಿ ಎಂದೂ ಸವಾಲು ಹಾಕದ್ದಾರೆ.

2 ರೂಪಾಯಿ ಮೋದಿ ಭಕ್ತರು ಮತ್ತು ಐಟಿ ಸೆಲ್‌ ಮುಖ್ಯಸ್ಥರು ಭಾಗವತ್‌ ಅವರ ಮಾತುಗಳನ್ನು ಖಂಡಿಸಲಿ. ವಿಶ್ವದ ಅತಿ ದೊಡ್ಡ ಎನ್‌ ಜಿಒ ಎಂದು ಹೇಳಿಕೊಳ್ಳುವ ಆರ್‌ ಎಸ್‌ ಎಸ್‌ ಈ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಲಿದೆ ಎಂದೂ ಖರ್ಗೆ ಪ್ರಶ್ನಿಸಿದ್ದಾರೆ.

More articles

Latest article