ವಿದ್ಯಾರ್ಥಿಗಳ ಬಡಿದಾಟಕ್ಕೆ ಬೆಚ್ಚಿಬಿದ್ದ ಹಾಸನ: ಮಚ್ಚು ಬೀಸಿದ ಅಪ್ತಾಪ್ತ‌ ವಿದ್ಯಾರ್ಥಿ

ಹಾಸನ: ಕಬ್ಬಡಿ ಪಂದ್ಯದ ವೇಳೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು, ಜಗಳ ತಾರಕಕ್ಕೇರಿ ವಿದ್ಯಾರ್ಥಿಗಳು ಪರಸ್ಪರ ಬಡಿದಾಡಿಕೊಂಡ ಘಟನೆ ಸಂಭವಿಸಿದೆ.

ಗಲಾಟೆ ಸಂದರ್ಭದಲ್ಲಿ ವಿದ್ಯಾರ್ಥಿ ಮೇಲೆ ಮತ್ತೋರ್ವ ಅಪ್ರಾಪ್ತ ವಿದ್ಯಾರ್ಥಿ ಮಚ್ಚು ಬೀಸಿದ್ದು, ಕೂದಲೆಳೆ ಅಂತರದಲ್ಲಿ ಅವಘಡ ತಪ್ಪಿದ

ನಿನ್ನೆ ಹಾಸನದ ನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಿಯುಸಿ ಕಾಲೇಜುಗಳ ಕ್ರೀಡಾಕೂಟದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕಬ್ಬಡಿ ಪಂದ್ಯ ನಡೆಯುತ್ತಿದ್ದ ವೇಳೆ ಶುರುವಾದ ಜಗಳ ನಂತರ ತಾರಕಕ್ಕೇರಿದೆ. ಮಚ್ಚು ಬೀಸಿದ ವಿದ್ಯಾರ್ಥಿಯನ್ನು ಹಿಗ್ಗಾಮುಗ್ಗಾ ಥಳಿಸಿದ ನೂರಾರು ವಿದ್ಯಾರ್ಥಿಗಳು ನೆಲಕ್ಕೆ ಕೆಡವಿ ಒದ್ದಿದ್ದಾರೆ.

ಗಾಯಾಳು ವಿದ್ಯಾರ್ಥಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

More articles

Latest article

Most read