ಕೌಟುಂಬಿಕ ಕಲಹ: ಪತ್ನಿಗೆ ಚಾಕು ಇರಿದು ಕೊಂದ ಕಾನ್ಸ್ಟೇಬಲ್

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಗೆ ಚಾಕು ಇರಿದು ಕೊಲೆ ಮಾಡಿರೋ ಘಟನೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದಿದೆ.

ಹಾಸನ ನಗರ ಪೊಲೀಸ್ ಠಾಣೆ ಪೇದೆ ಲೋಕನಾಥ್ ಎಂಬುವವ ತನ್ನ ಪತ್ನಿ ಮಮತಾಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗ ಚಾಕುವಿನಿಂದ ಇರಿದಿದ್ದಾನೆ. ಮಮತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಸಾವನ್ನಪ್ಪಿದ್ದಾರೆ.

ಪತ್ನಿಯನ್ನು ಕೂಲೆ ಮಾಡಿ ಆರೋಪಿ ಲೋಕನಾಥ್ ಪರಾರಿಯಾಗಲು ಯತ್ನಿಸಿದ್ದ. ಆ ಕೂಡಲೇ ಆರೋಪಿ ಪೇದೆ ಲೋಕನಾಥ್ನನ್ನು ಎಸ್‌ಪಿ ಕಚೇರಿ ಪೊಲೀಸರು ವಶಕ್ಕೆ ಪಡೆದುಕೊಂಡು, ತನಿಖೆ ನಡೆಸುತ್ತಿದ್ದಾರೆ..

ಕಳೆದ ನಾಲ್ಕೈದು ದಿನಗಳಿಂದ ಗಂಡ- ಹೆಂಡತಿ ನಡುವೆ ಜಗಳ ನಡೆಯುತ್ತಲೇ ಇದೆ. ಇಂದು ಪತಿ ವಿರುದ್ಧವೇ ಮಮತಾ ದೂರು ನೀಡಲು ಎಸ್‌ಪಿ ಕಚೇರಿಗೆ ಬಂದಿದ್ದರು. ಈ ವೇಳೆ ಲೋಕನಾಥ್ ಪತ್ನಿ ಮಮತಾಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.

More articles

Latest article

Most read