H-1B ವೀಸಾ ಶುಲ್ಕ ಕಾನೂನುಬಾಹಿರ : ಟ್ರಂಪ್‌ ಕ್ರಮ ರದ್ದುಗೊಳಿಸಿದ ಫೆಡರಲ್‌ ನ್ಯಾಯಾಲಯ

ವಾಷಿಂಗ್ಟನ್ :‌ ಹೆಚ್ಚು ಕೌಶಲ್ಯಪೂರ್ಣ ವಿದೇಶಿ ಕೆಲಸಗಾರರಿಗೆ ಹೊಸ H-1B ವೀಸಾಗಳ ಮೇಲೆ $100,000 ಶುಲ್ಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮವನ್ನು ಇಂದು ಫೆಡರಲ್ ನ್ಯಾಯಾಲಯವು ರದ್ದುಗೊಳಿಸಿದೆ.
ಬೋಸ್ಟನ್‌ನಲ್ಲಿನ ಯುಎಸ್ ಜಿಲ್ಲಾ ನ್ಯಾಯಾಧೀಶ ಲಿಯೋ ಸೊರೊಕಿನ್ ಈ ಶುಲ್ಕವು ಕಾಂಗ್ರೆಸ್ ಎಂದಿಗೂ ಅಧಿಕಾರ ನೀಡದ ಕಾನೂನುಬಾಹಿರ ತೆರಿಗೆಯಾಗಿದೆ ಎಂದು ಎಂದ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

ಈ ಮೂಲಕ ಅಮೆರಿಕಾದಲ್ಲಿ ವಲಸಿಗರ ವಿರುದ್ದ ಕೆಂಗಣ್ಣಿನಿಂದ ವಲಸೆ ವಿರೋಧಿ ನೀತಿಯನ್ನು ಅಳವಡಿಸುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಅಮೆರಿಕಾದ ಫೆಡರಲ್‌ ನ್ಯಾಯಾಲಯದಲ್ಲಿ ಭಾರಿ ಹಿನ್ನಡೆಯಾಗಿದ್ದು, ಕೌಶಲ್ಯಪೂರ್ಣ ವಿದೇಶಿ ಕೆಲಸಗಾರರಿಗೆ ನೀಡುವ ಹೊಸ H-1B ವೀಸಾಗಳ ಮೇಲೆ $100,000 ಶುಲ್ಕ ವಿಧಿಸುವ ಆದೇಶವನ್ನು ʼಕಾನೂನುಬಾಹಿರ ತೆರಿಗೆʼ ಎಂದು ಕರೆಯುವ ಮೂಲಕ ರದ್ದುಗೊಳಿಸಿದೆ.

ಅಮೆರಿಕಾದಲ್ಲಿ ಉದ್ಯೋಗ ಹರಸಿ ಹೋಗುವ ಕೌಶಲ್ಯಪೂರ್ಣ ವಿದೇಶಿ ಕೆಲಸಗಾರರಿಗೆ ಹೊರೆಯಾಗುವಂತೆ ಕಳೆದ ವರ್ಷ ಅಂದರೆ 2025ರ ಸೆಪ್ಟಂಬರ್‌ನಲ್ಲಿ H-1B ವೀಸಾಗಳ ಮೇಲೆ ಬರೋಬ್ಬರಿ

$100,000 ಶುಲ್ಕವನ್ನು ವಿಧಿಸಿದ್ದ ಟ್ರಂಪ್‌ ಆಡಳಿತದ ನಿರ್ಧಾರವನ್ನು ಪ್ರಶ್ನಿಸಿ 20 ಡೆಮಾಕ್ರಟಿಕ್‌ ರಾಜ್ಯ ಅಟಾರ್ನಿ ಜನರಲ್‌ಗಳು ಸಲ್ಲಿಸಿದ ಮೊಕದ್ದಮೆಯ
ಮೇರೆಗೆ ಈ ತೀರ್ಪು ಬಂದಿದ್ದು, ಬೋಸ್ಟನ್‌ನಲ್ಲಿನ US ಜಿಲ್ಲಾ ನ್ಯಾಯಾಧೀಶ ಲಿಯೋ ಸೊರೊಕಿನ್ “ಈ ಭಾರಿ ಶುಲ್ಕವು ಕಾಂಗ್ರೆಸ್(US ಸಂಸತ್ತು) ಎಂದಿಗೂ ಅಧಿಕಾರ ನೀಡದ ಕಾನೂನುಬಾಹಿರ ತೆರಿಗೆಯಾಗಿದೆ” ಎಂದು ತಿಳಿಸಿದ್ದಾರೆ.

ವಿಚಾರಣೆ ವೇಳೆ, H-1B ವೀಸಾದ ಮೇಲಿನ $100,000 ಶುಲ್ಕವು ಕೆಲವು ವಿದೇಶಿ ಪ್ರಜೆಗಳ ಪ್ರವೇಶವನ್ನು ನಿರ್ಬಂಧಿಸಲು ಅಧ್ಯಕ್ಷರು ಫೆಡರಲ್ ವಲಸೆ ಕಾನೂನಿನ ಅಡಿಯಲ್ಲಿ ವಿಧಿಸಲು ಅಧಿಕಾರ ಹೊಂದಿರುವ ಹಣಕಾಸಿನ ದಂಡವಾಗಿದೆ ಎಂದು ಟ್ರಂಪ್ ಆಡಳಿತ ವಾದಿಸಿತ್ತು.

ಆದರೆ, ಈ ವಾದವನ್ನು ತಿರಸ್ಕರಿಸಿರುವ ಕೋರ್ಟ್‌ “ಕಾಂಗ್ರೆಸ್ ಕಾನೂನಿನ ಮೂಲಕ ಅಂತಹ ಅಧಿಕಾರವನ್ನು ನಿಯೋಜಿಸದ ಹೊರತು ಅಧ್ಯಕ್ಷರಿಗೆ ತೆರಿಗೆ ವಿಧಿಸಲು ಯಾವುದೇ ಅಧಿಕಾರವಿಲ್ಲ. ಕಾಂಗ್ರೆಸ್‌ನ ಅಗತ್ಯ ನಿಯೋಗವಿಲ್ಲದೆ ಈ ನೀತಿಯು H-1B ಅರ್ಜಿಗಳ ಮೇಲೆ ತೆರಿಗೆಯನ್ನು ವಿಧಿಸುತ್ತದೆ ಎಂದು ನ್ಯಾಯಾಲಯವು ಕಂಡುಕೊಂಡಿದೆ. ಆದ್ದರಿಂದ $100,000 ಪಾವತಿಯ ಸಾರ ಮತ್ತು ಅನ್ವಯವು ಪಾವತಿಯನ್ನು ಯಾವುದೇ ರೀತಿಯಾಗಿ ಕರೆಯಲಾಗಿದ್ದರೂ ಘೋಷಣೆಯನ್ನು ಅನುಷ್ಠಾನಗೊಳಿಸುವ ನೀತಿ ಕಾನೂನುಬಾಹಿರವಾಗಿದ್ದು, ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ” ಎಂದು ತೀರ್ಪು ನೀಡಿದೆ. 

More articles

Latest article

Most read