ಸರ್ಕಾರಿ ನೇಮಕಾತಿ ಮಧ್ಯದಲ್ಲಿ ನಿಲ್ಲಿಸುವಂತಿಲ್ಲ: ಸುಪ್ರೀಂ ಕೋರ್ಟ್

Most read

ನವದೆಹಲಿ: ಸರ್ಕಾರಿ ನೇಮಕಾತಿಗಳ ಅಧಿಸೂಚನೆಯಲ್ಲಿ ನಿರ್ದಿಷ್ಟ ಸೂಚನೆಗಳನ್ನು ನೀಡದೆ, ಇಡೀ ಪ್ರಕ್ರಿಯೆಯನ್ನು ಮಧ್ಯದಲ್ಲಿ ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಅರ್ಜಿಯ ವಿಚಾರಣೆ ನಡೆಸಿತು.


ಒಂದು ಬಾರಿ ನೇಮಕಾತಿ ಪ್ರಕ್ರಿಯೆ ಆರಂಭವಾದರೆ, ಅದನ್ನು ಅರ್ಧದಲ್ಲಿಯೇ ನಿಲ್ಲಿಸುವಂತಿಲ್ಲ. ಇದು ಆಟದ ನಿಯಮ. ನೇಮಕಾತಿಯ ನಿಯಮಗಳು ಅನಿಯಂತ್ರಿತವಾಗಿರಬಾರದು ಹಾಗೂ ಸಂವಿಧಾನದ 14ನೇ ವಿಧಿಗೆ ಅನುಗುಣವಾಗಿರಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ.ಎಸ್. ನರಸಿಂಹ, ಪಂಕಜ್ ಮಿತ್ತಲ್ ಹಾಗೂ ಮನೋಜ್ ಮಿಶ್ರಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಸರ್ಕಾರಿ ನೇಮಕಾತಿಗಳು ಎಂದೆಂದಿಗೂ ತಾರತಮ್ಯ ರಹಿತ ಹಾಗೂ ಪಾರದರ್ಶಕವಾದ ನೀತಿಗಳನ್ನು ಹೊಂದಿರಬೇಕು. ಆದರೆ ಮಧ್ಯದಲ್ಲಿಏನೇ ಬದಲಾವಣೆಗಳಾದರೂ ಅದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಎಂದು ನ್ಯಾಯಾಲಯ ಹೇಳಿದೆ.

More articles

Latest article